Advertisement

ಎಫ್ ಡಿಎ ನೇಮಕಾತಿ ಅಕ್ರಮ: ಮಹಿಳಾ ಪಿಎಸ್‌ಐ ಅಮಾನತು

06:04 PM Sep 20, 2022 | Team Udayavani |

ಮೈಸೂರು: ಎಫ್ ಡಿಎ ಹುದ್ದೆ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಲ್ಲಿ ಮೈಸೂರಿನ ನರಸಿಂಹರಾಜ ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಅಶ್ವಿ‌ನಿ ಅನಂತಪುರ ಅವರನ್ನು ನಗರ ಪೊಲೀಸ್‌ ಆಯುಕ್ತ ಡಾ| ಚಂದ್ರಗುಪ್ತ ಅಮಾನತುಗೊಳಿಸಿದ್ದಾರೆ.

Advertisement

ಬಸವರಾಜು ಎಂಬವರಿಗೆ ಹುದ್ದೆ ಕೊಡಿಸಲು ಬಾಗಲಕೋಟೆ ಜಿಲ್ಲೆಯ ಸಂಗಮೇಶ ಝಳಕಿ ಎಂಬವರ ಜತೆ ಅಶ್ವಿ‌ನಿ ಮಾತನಾಡಿದ್ದಾರೆ ಎನ್ನಲಾದ ಮೊಬೈಲ್‌ ಹಾಗೂ ವಾಟ್ಸ್‌ಆ್ಯಪ್‌ ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ಅಲ್ಲದೆ, ಹಣ ವರ್ಗಾವಣೆಯ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಕುರಿತು ಸಂಚಾರ ವಿಭಾಗದ ಎಸಿಪಿ ಪ್ರಾಥಮಿಕ ತನಿಖೆ ನಡೆಸಿದ್ದು, ಆರೋಪಗಳು ಮೇಲ್ನೋಟಕ್ಕೆ ನೈಜವೆಂದು ತಿಳಿದು ಬಂದ ಕಾರಣ ಅಮಾನತು ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next