ವಾಷಿಂಗ್ಟನ್: ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್(ಎಫ್ ಬಿಐ) ತಂಡವು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ವಿಲ್ಲಿಂಗ್ಟನ್ ಮತ್ತು ಡೆಲವೇರ್‌ನಲ್ಲಿರುವ ನಿವಾಸಗಳ ಮೇಲೆ ಭಾನುವಾರ ದಾಳಿ ನಡೆಸಲಾಗಿದೆ. ಹೊಸದಾಗಿ ಆರು ದಾಖಲೆಗಳು ಮತ್ತು ಅವರ ಕೆಲವು ಟಿಪ್ಪಣಿ ಬರಹಗಳನ್ನು ವಶಪಡಿಸಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಬೈಡೆನ್ ಪರ ನ್ಯಾಯವಾದಿ, “ಅಮೆರಿಕ ಅಧ್ಯಕ್ಷರು ಸ್ವಯಂ ಪ್ರೇರಿತರಾಗಿ ತಮ್ಮ ಮನೆಯ ಶೋಧಕ್ಕೆ ಎಫ್ಬಿಐಗೆ ಅವಕಾಶ ಮಾಡಿಕೊಟ್ಟರು. ಆದರೆ ಸರ್ಚ್ ವಾರೆಂಟ್ ಇಲ್ಲದ ಕಾರಣ ಹೆಚ್ಚಿನ ತಪಾಸಣೆ ನಡೆಯಲಿಲ್ಲ. ಈ ವೇಳೆ ಆರು ದಾಖಲೆಗಳನ್ನು ಎಫ್ಬಿಐ ವಶಪಡಿಸಿಕೊಂಡಿದೆ,’ ಎಂದು ತಿಳಿಸಿದ್ದಾರೆ.
ಮಧ್ಯಂತರ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಮೊದಲ ಬಾರಿಗೆ ಜ.12ರಂದು ಬಿಡೆನ್ ಅವರ ವಾಷಿಂಗ್ಟನ್‌ನ ಪೆನ್ ಬಿಡೆನ್ ಸೆಂಟರ್‌ನ ಕಚೇರಿ ಮೇಲೆ ಎಫ್ಬಿಐ ದಾಳಿ ನಡೆಸಿ, ಕೆಲವು ಸರ್ಕಾರಿ ಕಡತಗಳನ್ನು ವಶಕ್ಕೆ ಪಡೆದಿತ್ತು. ಆದರೆ ಈ ಬೆಳವಣಿಗೆಗಳು ರಾಜಕೀಯ ರೂಪ ಪಡೆದುಕೊಂಡಿದೆ. ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್ 2 ಬಾರಿಗೆ ಎರಡನೇ ಬಾರಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.