Advertisement

ಎಫ್ಬಿ ಜಾಹೀರಾತು ಪಾರದರ್ಶಕ

07:00 AM Apr 08, 2018 | |

ವಾಷಿಂಗ್ಟನ್‌: ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣ ಹಾಗೂ ಅಮೆರಿಕ ಸಾರ್ವತ್ರಿಕ ಚುನಾವಣೆಯಲ್ಲಿ ಫೇಸ್‌ಬುಕ್‌ ಬಳಕೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ, ರಾಜಕೀಯ ಸಂಬಂಧಿ ಜಾಹೀರಾತುಗಳನ್ನು ಇನ್ನಷ್ಟು ಪಾರದರ್ಶಕವನ್ನಾಗಿಸಲು ಫೇಸ್‌ಬುಕ್‌ ನಿರ್ಧರಿಸಿದೆ. ಜಾಹೀರಾತುದಾರರ ಗುರುತು ಹಾಗೂ ಸ್ಥಳದ ವಿವರ ಖಚಿತವಾದ ಬಳಿಕವೇ ಜಾಹೀರಾತುಗಳನ್ನು ಒಪ್ಪಿಕೊಳ್ಳಲಾಗುತ್ತದೆ ಎಂದು ಹೇಳಿದೆ.

Advertisement

 ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಅನಾಮಿಕವಾಗಿ ಜಾಹೀರಾತು ನೀಡುವಂತಿಲ್ಲ. ಇಂತಹ ಜಾಹೀರಾತಿನ ಬಲ ಮೂಲೆಯಲ್ಲಿ ರಾಜಕೀಯ ಜಾಹೀರಾತು ಎಂದು ನಮೂದಿಸಿ, ಅದರ ಪಕ್ಕವೇ ಈ ಜಾಹೀರಾತಿಗೆ ಪಾವತಿದಾರರು       ಯಾರು ನಮೂದಿಸಲಾಗುತ್ತದೆ. ದೃಢೀಕರಣ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ.  ಮುಂದಿನ ಕೆಲ ತಿಂಗಳುಗಳಲ್ಲಿ ಜಾಹೀರಾತುಗಳ ಮೇಲೆ ಈ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ತಪ್ಪಿಸಲು ಈ ಕ್ರಮ  ಮಹತ್ವದ್ದಾಗಿದೆ ಎಂದು ಫೇಸ್‌ಬುಕ್‌ ಹೇಳಿದೆ. ಈ ಬದಲಾವಣೆಗಳು 2019ರ ಭಾರತದ ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾರಿಯಗಲಿವೆ. ರಾಜಕೀಯ ಪ್ರಚಾರ ಪಾರದರ್ಶಕವಾಗಲಿದೆ ಎಂದ ನಿರೀಕ್ಷಿಸಲಾಗಿದೆ.

ಫೇಕ್‌ ಪೇಜ್‌ಗಳ ವಿರುದ್ಧ ಕ್ರಮ: ನಕಲಿ ಪೇಜ್‌ಗಳ ಹಾವಳಿ ತಪ್ಪಿಸಲು, ದೊಡ್ಡ ಪೇಜ್‌ಗಳ ನಿರ್ವಾಹಕರೂ ಪರಿಶೀಲನೆಗೆ ಒಳಪಡ ಬೇಕು ಎಂದು ಫೇಸ್‌ಬುಕ್‌ ಸೂಚಿಸಿದೆ. ಇಲ್ಲದಿದ್ದರೆ, ಪೇಜ್‌ನಲ್ಲಿ ಪೋಸ್ಟ್‌ ಮಾಡಲು ಅವಕಾಶವಿರುವುದಿಲ್ಲ.

ಇನ್ನಷ್ಟು ದತ್ತಾಂಶ ನಿಯಮ ಉಲ್ಲಂಘನೆ?: ಅನಾಲಿಟಿಕಾ ಸಂಸ್ಥೆ ಫೇಸ್‌ಬುಕ್‌ ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡ ಬೆನ್ನಲ್ಲೇ ಇನ್ನೂ ಇತರ ಸಂಸ್ಥೆಗಳು ದತ್ತಾಂಶ ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಫೇಸ್‌ಬುಕ್‌ ಸಿಒಒ ಶೆರಿಲ್‌ ಸ್ಯಾಂಡ್‌ಬರ್ಗ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next