Advertisement

ಗೇಮಿಂಗ್ ಪ್ರಿಯರಿಗೆ ಸಂತಸದ ಸುದ್ದಿ: FAU-G ಗೇಮ್ ಬಿಡುಗಡೆ ದಿನಾಂಕ ಪ್ರಕಟ

05:26 PM Jan 04, 2021 | Team Udayavani |

ನವದೆಹಲಿ: ಬಹುದಿನಗಳಿಂದ ಗೇಮಿಂಗ್ ಪ್ರಿಯರು ಕಾತರದಿಂದ ಕಾಯುತ್ತಿದ್ದ ಪಬ್ ಜಿ ಪರ್ಯಾಯ ಎಂದೇ ಗುರುತಿಸಲ್ಪಟ್ಟಿರುವ FAU-G ಗೇಮ್ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದನ್ನು ಭಾರತದಲ್ಲೇ ಅಭಿವೃದ್ಧಿ ಪಡಿಸಿದ್ದು , ಪ್ರಧಾನಿ ಮೋದಿಯವರ ಆತ್ಮನಿರ್ಭರ ಯೋಜನೆಗೆ ಬೆಂಬಲವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಗೇಮ್ ಪರಿಚಯಿಸಿದ್ದರು.

Advertisement

ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಈ ಗೇಮಿಂಗ್ ಅಪ್ಲಿಕೇಶನ್ ಬಿಡುಗಡೆಗೊಳ್ಳಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಲಡಾಕ್ ನ ಹಿಮ ಪ್ರದೇಶದಲ್ಲಿ ಆ್ಯಕ್ಷನ್ ದೃಶ್ಯಗಳಿರುವಂತೆ ರೂಪುಗೊಳಿಸಲಾಗಿದೆ. ಈ ಗೇಮ್ ಗೆ ಪಂಜಾಬ್ ಮತ್ತು ಹಿಂದಿ ಭಾಷೆಯಲ್ಲಿ ಥೀಮ್ ಸಾಂಗ್ ಅನ್ನು ಕೂಡ ನೀಡಲಾಗಿದ್ದು, ಗೇಮಿಂಗ್ ಪ್ರಿಯರ ಮನಗೆಲ್ಲುವುದರಲ್ಲಿ  ಆಶ್ಚರ್ಯವಿಲ್ಲ.

1 ನಿಮಿಷ 38 ಸೆಕೆಂಡ್ ಗಳಿರುವ FAU-G ಟ್ರೇಲರ್ ಫೇಸ್ ಬುಕ್, ಯೂಟ್ಯೂಬ್, ಟ್ವಿಟ್ಟರ್ ನಲ್ಲಿ ಲಭ್ಯವಿದೆ. ಇಲ್ಲಿ ಆಟಗಾರರು ಭಾರತೀಯ ಸೈನಿಕರ ಸಮವಸ್ತ್ರ ಧರಿಸಿದ್ದು, ಶತ್ರುಗಳೊಂದಿಗೆ ಹೋರಾಟದಲ್ಲಿ ನಿರತರಾಗಿದ್ದಾರೆ.  ಭಾರತ ಮತ್ತು ಚೀನಾ ಗಡಿಯಲ್ಲಿ ನಡೆದ ಸಂಘರ್ಷವೇ ಈ ಗೇಮ್ ಗೆ ಪ್ರೇರಣೆಯಾಗಿದ್ದು, ಈ ಕಾರಣಕ್ಕಾಗಿ ಭಾರತೀಯ ಸೈನಿಕರು ಗಡಿಯಲ್ಲಿ ಶತ್ರುಗಳೊಂದಿಗೆ ಹೋರಾಡುವ ರೀತಿಯಲ್ಲಿ ಚಿತ್ರಿಸಲಾಗಿದೆ. ಇದರ ಜೊತೆಗೆ ಗಲ್ವಾನ್ ಕಣಿವೆಯ ಹಂತವನ್ನೂ ಕೂಡ ನೀಡಲಾಗಿದೆ.

FAU-G ಗೇಮ್ ಅನ್ನು nCore  ಸಂಸ್ಥೆ  ಅಭಿವೃದ್ಧಿಪಡಿಸಿದ್ದು, ಅದೇ ಹೇಳುವಂತೆ ಈ ಗೇಮ್ ನಲ್ಲಿ ಗನ್ (ಬಂದೂಕು) ನೀಡಲಾಗಿಲ್ಲ.  ಮುಂದಿನ ಹಂತದಲ್ಲಿ ಅಥವಾ ಅಪ್ ಡೇಟ್ ಗಳಲ್ಲಿ ಬಂದೂಕು ಸೇರಿದಂತೆ ಇತರ ಶಸ್ತ್ರಾಸ್ತ್ರ ನೀಡುವುದಾಗಿ ತಿಳಿಸಿದೆ.

Advertisement

ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಗೇಮ್ ಲಭ್ಯವಿರಲಿದ್ದು, ಈವರೆಗೂ 1 ಮಿಲಿಯನ್ ಗಳಿಗಿಂತಲೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ಆದರೇ  ಐಓಎಸ್ ನಲ್ಲಿ ಫೌ-ಜಿ ಎಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

FAU-G  ಎಂದರೇ Fearless and United-Guards ಎಂಬರ್ಥವಿದೆ. ಈ ಗೇಮ್ ನಿಂದ ಬರುವ 20% ಆದಾಯವನ್ನು Bharatkeveer ಟ್ರಸ್ಟ್ ಗೆ ನೀಡಲಾಗುತ್ತದೆ ಎಂದು ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next