ಅಪ್ಪನಿಗೆ ಒಂದು ಪತ್ರ
ಪ್ರೀತಿಯ ಅಪ್ಪನಿಗೆ ನಿನ್ನ ಪ್ರೀತಿಯ ಮಗ ಗಿರೀಶ ಮಾಡುವ ವಂದನೆಗಳು. ನಾನು ಕ್ಷೇಮವಾಗಿದ್ದೇನೆ ನೀವು ಕೂಡ ಕ್ಷೇಮವಾಗಿ ಇದ್ದೀರಿ ಎಂದು ಭಾವಿಸುತ್ತೇನೆ. ದೂರವಾಣಿಯ ಕರೆಯ ಮೂಲಕ ಹಂಚಲು ಸಾಧ್ಯವಾಗದ್ದನ್ನು ನಾನು ಈ ಪತ್ರದ ಮೂಲಕ ಬರೆಯುತ್ತೇನೆ.
ಅಪ್ಪ ನೀನೆಂದರೆ ಬೆಳಗು ಚಂದಿರ ದಿನಕರನಿಗಿಂತ ಹೆಚ್ಚು ನನಗೆ .ಅಂದು ಬೆನ್ನಿಗೆ ಹೊಡೆದ ಹೊಡೆತ ಹೆಚ್ಚಿಸುತ್ತದೆ ನನ್ನ ಹೃದಯ ಬಡಿತ. ಅಂದಿನ ಪೆಟ್ಟು ನನ್ನ ಯಶಸ್ಸಿಗೆ ಕಾರಣವಾಯಿತು. ಅಪ್ಪ ನೀನು ಕೊಟ್ಟ ಮೊದಲ ಉಡುಗೆ ಎಂದರೆ ಚಂದದ ಉಡುಪು. ಆದರೆ ನನಗೆ ನಿನ್ನ ಪ್ರೀತಿಯೇ ಉಡುಗೆರೆ .ಅಪ್ಪ ನಾ ಗರಿಷ್ಠ ಅಂಕ ಪಡೆದಾಗ ಪಟ್ಟ ಸಂತೋಷ ಇಂದು ನನ್ನ ಕಣ್ಣ ಮುಂದೆ ಇದೆ. ಆ ದಿನ ನಿನ್ನ ಭಾವ ಮಗ ಚುನಾವಣೆಯಲ್ಲಿ ವಿಜಯ ಸಾಧಿಸಿದ ಹಾಗೆ. ಕಲಿಕೆಯ ಜೊತೆ ಆಟದಲ್ಲಿ ತೊಡಗಿಸಿದ ನನಗೆ ಎಂದು ನೀನೇ ದಾರಿದೀಪ .ನನ್ನಲ್ಲಿ ನವಚೈತನ್ಯ ತುಂಬಿ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲು ಬಿಡದವ . ಅದು ನಿನ್ನ ದೊಡ್ಡ ಗುಣ .ಹಾಗೆ ನಾನು ನಿನ್ನ ವಿಶ್ವಾಸಕ್ಕೆ ತಣ್ಣೀರು ಹಾಕೆನು. ನಿನ್ನ ಬಗ್ಗೆ ಬರೆಯಲು ಪದಗಳೇ ಸಾಲದು ಇನ್ನೂ ಬರಬೇಕೆಂಬ ಖುಷಿ.
ಇತೀ
ನಿನ್ನ ಪ್ರೀತಿಯ ಸುಪುತ್ರ
ಗಿರೀಶ್ ಪಿಎಂ