Advertisement

ಅಪ್ಪ ಎಂದರೆ ರಕ್ಷಣೆ ಅಮ್ಮ ಎಂದರೆ ಪ್ರೀತಿ…

03:00 PM Jun 16, 2018 | Sharanya Alva |

ಸಮಾಜದಲ್ಲಿ ತಂದೆಯವರಿಗೆ ವಿಶೇಷ ಗೌರವ ಕೊಡುವಂತಹ ದಿನವೇ ಫಾದರ್ ಡೇ ಭಾರತದಲ್ಲಿ ಫಾದರ್ ಡೇಯನ್ನು ಪ್ರತಿ ವರ್ಷದ ಜೂನ್‌ ತಿಂಗಳಿನ ಮೂರನೆ ಭಾನುವಾರದಂದೂ ಹಾಗೂ ಇತರ ಕಡೆಗಳಲ್ಲಿ ಇನ್ನಿತರ ದಿನಗಳಿಂದೂ ಅಪ್ಪಂದಿರ ದಿನಾಚರಣೆ ಆಚರಿಸಲಾಗುತ್ತದೆ.

Advertisement

ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು .ತಾಯಿಯನ್ನು ಗೌರವಿಸಲು ಆಚರಿಸಲು ಮಾತೃ ದಿನಕ್ಕೆ ಇದು ಪೂರಕವಾಗಿದೆ. ಒಂದು ಮಗು ಹುಟ್ಟಿದಾಗ ಅದಕ್ಕೆ ಅಮ್ಮ-ಅಪ್ಪನ ಪ್ರೀತಿ ಜಾಸ್ತಿ ಸಿಗುತ್ತದೆ. ಕೆಲವೊಂದು ಕಡೆ ಮಕ್ಕಳಿಗೆ ತಾಯಿಗಿಂತ ಸಲಿಗೆ ಜಾಸ್ತಿ ತಂದೆ ಮೇಲೆ ಇರುತ್ತದೆ. ತಂದೆಗೆ ಮಕ್ಕಳ ಮೇಲೆ ಕೂಡ ಅಷ್ಟೇನೆ ಪ್ರೀತಿ ಇರುತ್ತದೆ.ಎಲ್ಲೋ ಒಂದು -ಎರಡು ಕಡೆ ನತದೃಷ್ಟ ಮಕ್ಕಳಿಗೆ ತಂದೆ ಪ್ರೀತಿಯಿಂದ ವಂಚಿತರಾಗುತ್ತಾರೆ.ವಂಚಿತವಾದ ಮಕ್ಕಳಿಗೆ ಮಾತ್ರ ಗೊತ್ತಿರುತ್ತದೆ ಜೀವನದಲ್ಲಿ ತಾಯಿ-ತಂದೆಯರ ಪಾತ್ರ ಎಷ್ಟು ಮುಖ್ಯ ಅಂತ.

ಅಪ್ಪ ಎಂದರೆ ರಕ್ಷಣೆ ಅಮ್ಮ ಎಂದರೆ ಪ್ರೀತಿ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಿಸಿಯೇ ಬೆಳೆಯಬೇಕು ಅದು ಮಕ್ಕಳ ಏಳಿಗೆಗೆ ಪ್ರತಿಫ‌ಲನವಾಗದೇ ಇರದು. ತಾಯಿಯೊಂದಿಗೆ ನಕ್ಕು ನಲಿಯುವ ಮಕ್ಕಳು ತಂದೆಯಿಂದ ಆನತಿ ದೂರದಲ್ಲೇ ನಿಂತು ಆಜ್ಞೆಗಳನ್ನು ಪಾಲಿಸುತ್ತಾ ಅವಶ್ಯಕತೆಗಳು ಬಂದಾಗ ಹಿಂಜರಿಯುತ್ತಲೇ ಅಪ್ಪನಿಗೆ ಹೇಳುತ್ತಿದ್ದ ಮಕ್ಕಳು ಅಪ್ಪನ ಮಾತುಗಳನ್ನು ಮೀರದೆ ಆ ಸಂಬಂಧಕ್ಕೆ ಒಂದು ಗೌರವ ತಂದುಕೊಟ್ಟಿರುತ್ತಾರೆ. ಬಾಳಿನ ಮುಸ್ಸಂಜೆಯಲ್ಲಿರುವ ತಂದೆ ತಾಯಿ ಚೆನ್ನಾಗಿ ನೋಡಿಕೊಳ್ಳುವುದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ.

– ಶ್ರೀರಾಮ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next