Advertisement

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

10:45 AM May 21, 2024 | Team Udayavani |

ಪುಣೆ: ವೇಗವಾಗಿ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣರಾದ ಪ್ರಕರಣ ಸಂಬಂಧ ಬಾಲಕನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಏನಿದು ಘಟನೆ?: ಭಾನುವಾರ ಮುಂಜಾನೆ ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರ ಮದ್ಯಪಾನ ಮಾಡಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಅನಿಸ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಎನ್ನುವ ದಂಪತಿ ಸಾವನ್ನಪ್ಪಿದ್ದರು. ಈ ಸಂಬಂಧ ಪೋರ್ಷೆಯಲ್ಲಿದ್ದ ಅಪ್ರಾಪ್ತ ವಯಸ್ಕ ಮತ್ತು ಇತರ ಇಬ್ಬರನ್ನು ಪೊಲೀಸರು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.

ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿತ್ತು. ಕಲ್ಯಾಣಿನಗರದ ಪಬ್‌ನಲ್ಲಿ ಪಾರ್ಟಿ ಮುಗಿಸಿ ಸ್ನೇಹಿತರು ಮನೆಗೆ ಮರಳುತ್ತಿದ್ದ ವೇಳೆ ಅವಘಡ ನಡೆದಿತ್ತು.

ಬಂಧನಕ್ಕೊಳಗಾದ 14 ಗಂಟೆಗಳೊಳಗೆ ಜಿಲ್ಲಾ ನ್ಯಾಯಾಲಯದಿಂದ ಅಪ್ರಾಪ್ತನಿಗೆ ಜಾಮೀನು ನೀಡಿತ್ತು. ಪೊಲೀಸರ ಪ್ರಕಾರ, ಬಾಲಾಪರಾಧಿ ಮಾಡಿದ ಅಪರಾಧವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸದ ಕಾರಣ ಜಾಮೀನು ನೀಡಲಾಗಿತ್ತು.

ಪ್ರಕರಣ ಸಂಬಂಧ ಬಾಲಕನ ತಂದೆ ರಿಯಲ್ ಎಸ್ಟೇಟ್ ಡೆವಲಪರ್ ವಿಶಾಲ್ ಅಗರವಾಲ್  ಅವರನ್ನು ಮಂಗಳವಾರ(ಮೇ.21 ರಂದು) ಬೆಳಗ್ಗೆ ಛತ್ರಪತಿ ಸಂಭಾಜಿನಗರ ಪ್ರದೇಶದಲ್ಲಿ ಬಂಧಿಸಲಾಗಿದೆ.

Advertisement

ಪುಣೆ ಪೊಲೀಸರು ಬಾಲಕನ ತಂದೆ ವಿರುದ್ಧ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು 77 ರ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. (ಅಪ್ರಾಪ್ತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದು ಮತ್ತು ಅಪ್ರಾಪ್ತ ವಯಸ್ಕರಿಗೆ ಮಾದಕ ವಸ್ತುಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದೆ).

“ಅಪಘಾತ ಪ್ರಕರಣದಲ್ಲಿ ಬಾಲಾಪರಾಧಿಗಳಿಗೆ ಮದ್ಯ ನೀಡಿದ ಬಾರ್ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು 77 ರ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ” ಎಂದು ಪುಣೆ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈರಲ್‌ ಆಗಿದ್ದ ವಿಡಿಯೋ: ಬೈಕ್‌ ಗೆ ಢಿಕ್ಕಿಯಾದ ಬಳಿಕ ಕಾರು ರಸ್ತೆ ಬದಿಯ ತಡೆ ಗೋಡೆಗೆ ಢಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ಕಾರಿನಿಂದ ಹೊರ ಬರಲು ಯತ್ನಿಸಿದ ಚಾಲಕನಿಗೆ ಜನರ ಗುಂಪೊಂದು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next