Advertisement

ಹಿಮಾಚಲ ಪ್ರದೇಶ: ಕಾರು ಕಮರಿಗೆ ಬಿದ್ದು ತಂದೆ ಸಾವು; 2 ಮಕ್ಕಳಿಗೆ ಗಂಭೀರ ಗಾಯ

07:49 PM Jun 12, 2022 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಭಾನುವಾರ ಕಾರು ಕಮರಿಗೆ ಬಿದ್ದಿದ್ದರಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಅವರ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಸಿರ್ಮೌರ್ ಜಿಲ್ಲೆಯ ಗ್ಲಾಟ್ಟಿ ಗ್ರಾಮದ ಮಹೇಂದರ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪುತ್ರಿ ಮೆಹಕ್ ವರ್ಮಾ (15) ಮತ್ತು ಪುತ್ರ ಅಭಿಷೇಕ್ ವರ್ಮಾ (12) ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಹಣ, ಜಾತಿ ಪ್ರಭಾವ ಪ್ರಜಾತಂತ್ರಕ್ಕೆ ಮಾರಕ: ವಾಟಳ್ ನಾಗರಾಜ್

ರಾಜ್‌ಗಢ್ ತಹಸಿಲ್‌ನ ಶಾಲೇಚ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ರಾಜ್‌ಗಢ ಪ್ರಾದೇಶಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ .

Advertisement
Advertisement

Udayavani is now on Telegram. Click here to join our channel and stay updated with the latest news.

Next