Advertisement

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

12:07 AM Jul 06, 2022 | Team Udayavani |

ನವದೆಹಲಿ: ಅಪ್ಪ ಸಂಜಯ್‌ ಶರ್ಮಾ ವಾಯು ಪಡೆಯ ಯುದ್ಧ ವಿಮಾನಗಳ ಪೈಲೆಟ್‌.
ಅವರನ್ನೇ ನೋಡಿ ಬೆಳೆದ ಮಗಳು ಅನನ್ಯಾ ಶರ್ಮಾ ಕೂಡ ಇದೀಗ ಯುದ್ಧ ವಿಮಾನಗಳ ಪೈಲೆಟ್‌ ಆಗಿದ್ದಾರೆ.

Advertisement

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಜೋಡಿ ಒಟ್ಟಿಗೇ ಸೇವೆ ಸಲ್ಲಿಸಿ ದಾಖಲೆ ಬರೆದಿದೆ.

ಅಂದ ಹಾಗೆ ಈ ಜೋಡಿ ಮೇ ತಿಂಗಳಾಂತ್ಯದಲ್ಲಿ ಕರ್ನಾಟಕದ ಬೀದರ್‌ನಲ್ಲಿ Hawk- 132 ಯುದ್ಧವಿಮಾನವನ್ನು ಜತೆಯಾಗಿ ನಡೆಸಿದೆ. ಅದರ ಫೋಟೋ ಇದೀಗ ಎಲ್ಲೆಡೆ ಹರಿದಾಡಿದೆ. ಅನನ್ಯ ಬಿ.ಟೆಕ್‌ ಪದವಿ ಪಡೆದಿದ್ದು, ಬೀದರ್‌ನಲ್ಲಿ ವಾಯು ಪಡೆಯ ಉನ್ನತ ಮಟ್ಟದ ಯುದ್ಧವಿಮಾನಗಳ ತರಬೇತಿ ಪಡೆಯುತ್ತಿದ್ದಾರೆ. ಸಂಜಯ್‌ ಅವರು ಮಿಗ್‌-21 ಯುದ್ಧ ವಿಮಾನದ ಪೈಲೆಟ್‌ ಆಗಿ ಅನುಭವ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next