Advertisement

ಪೊಲೀಸರ ಹಿಂಸೆಗೆ ತಂದೆ, ಮಗ ಬಲಿ?

10:48 AM Jun 28, 2020 | sudhir |

ಚೆನ್ನೈ: ಪೊಲೀಸ್‌ ಬಂಧನಕ್ಕೊಳಪಟ್ಟಿದ್ದ ಅಂಗಡಿ ಮಾಲಕ ಪಿ.ಜಯರಾಜ್‌ ಹಾಗೂ ಅವರ ಪುತ್ರ ಬೆನಿಕ್ಸ್‌ ಅವರು ಬಂಧನದಿಂದ ಬಿಡುಗಡೆ­ಯಾಗಿ ಬಂದ 4 ದಿನದಲ್ಲಿ ಮೃತಪಟ್ಟಿದ್ದು, ಪೊಲೀಸರ ಹಿಂಸೆಯಿಂದಲೇ ಅವರು ಸಾವನ್ನಪ್ಪಿರುವ ಬಗ್ಗೆ ಅನುಮಾನಗಳು ಎದ್ದಿವೆ. ಈ ಬಗ್ಗೆ ರಾಜಕೀಯ, ಸಾಮಾಜಿಕ ವಲಯಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

ಕಳೆದ ಶುಕ್ರವಾರದಂದು ಲಾಕ್‌ಡೌನ್‌ ನಿಯಮಗಳನ್ನು ಮೀರಿಯೂ ತಮ್ಮ ಮೊಬೆ„ಲ್‌ ಮಳಿಗೆಯನ್ನು ತೆಗೆದಿದ್ದ ಕಾರಣಕ್ಕೆ ಅಪ್ಪ-ಮಗನಾದ ಪಿ.ಜಯರಾಜ್‌ ಮತ್ತು ಬೆನಿಕ್ಸ್‌ ಅವರನ್ನು ಸಾಥನ್‌ಕುಲಂ ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿ­ದ್ದರು. ಸಣ್ಣ ಕಾರಣಕ್ಕಾಗಿ ಠಾಣೆಯಲ್ಲಿ ಅವರಿಬ್ಬರ ಮೇಲೆ ಪೊಲೀಸರು ಮನಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಪರಿಣಾಮ ಠಾಣೆಯಿಂದ ಬಿಡುಗಡೆ ಯಾಗಿ ಬಂದ ನಾಲ್ಕೇ ದಿನದಲ್ಲಿ ತಂದೆ, ಮಗ ಇಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರ ವೈರಲ್‌ ಆಗುತ್ತಿದ್ದಂತೆ, ನೆಟ್ಟಿಗರು ಈ ಪ್ರಕರಣವನ್ನು ಇತ್ತೀಚೆಗೆ ಅಮೆರಿಕದಲ್ಲಿ ಪೊಲೀಸ್‌ ದೌರ್ಜನ್ಯ­ದಿಂದ ಮೃತಪಟ್ಟ ಫ್ಲಾಯ್ಡ ಪ್ರಕರಣಕ್ಕೆ ಹೋಲಿಸಿ­ದ್ದಾರೆ. ಡಿಎಂಕೆ ನಾಯಕ ಸ್ಟಾಲಿನ್‌ ಅವರು ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿ­ದ್ದಾರೆ. ಇದೇ ವೇಳೆ, ಎಡಿಎಂಕೆ ನಾಯಕರು ಸರಕಾರದ ವಿರುದ್ಧ ಹರಿಹಾ­ಯ್ದಿ­ದ್ದಾರೆ. ಪೊಲೀಸರಿಗೆ ಕಾನೂನನ್ನು ಕೈಗೆ ತೆಗೆದು­ಕೊಳ್ಳುವ ಅವಕಾಶವನ್ನು ಸರಕಾರವೇ ಕೊಟ್ಟಿದೆ ಎಂದಿದ್ದಾರೆ. ನಟಿಯರಾದ ಪ್ರಿಯಾಂಕಾ ಚೋಪ್ರಾ, ಸಮಂತಾ, ಕಾಜೋಲ್‌ ಅಗರ್ವಾಲ್‌, ಕ್ರಿಕೆಟಿಗ ಶ್ರೀಖರ ಧವನ್‌ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next