Advertisement

ಮತ್ತೆ ಮುಖಭಂಗ;2021ರ ಫೆಬ್ರವರಿ-ಬೂದುಪಟ್ಟಿಯಲ್ಲಿ ಪಾಕ್‌!

06:18 PM Oct 26, 2020 | Nagendra Trasi |

ಹೊಸದಿಲ್ಲಿ: ಹಣಕಾಸು ಕ್ರಿಯಾ ಕಾರ್ಯಪಡೆ  (ಎಫ್ಎಟಿಎಫ್) ಸೂಚಿಸಿದ್ದ ಯೋಜನೆಗಳನ್ನು ಪೂರೈಸಲು ವಿಫ‌ಲವಾದ ಕಾರಣ ಪಾಕಿಸ್ಥಾನಕ್ಕೆ 2021ರ ಫೆಬ್ರವರಿವರೆಗೆ “ಬೂದುಪಟ್ಟಿ’ ಪಟ್ಟವೇ ಗತಿಯಾಗಿದೆ. 39 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಎಫ್ಎಟಿಎಫ್ ನ ಸಭೆಯಲ್ಲಿ ಪಾಕಿಸ್ಥಾನಕ್ಕೆ ಮತ್ತೆ ಮುಖಭಂಗವಾಗಿದೆ.

Advertisement

ಉಗ್ರ ಚಟುವಟಿಕೆ ನಿಯಂತ್ರಣಕ್ಕೆ 27 ಯೋಜನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪಾಕಿಸ್ಥಾನಕ್ಕೆ ಸೂಚಿಸಲಾಗಿತ್ತು. ಇದರಲ್ಲಿ 21 ಟಾಸ್ಕ್ಗಳನ್ನಷ್ಟೇ ಪಾಕ್‌ ಪೂರೈಸಿತ್ತು. “ಬಾಕಿ ಉಳಿದ ಎಲ್ಲ ಷರತ್ತುಗಳನ್ನು ಪೂರೈಸಿದ ಮೇಲಷ್ಟೇ ಇಸ್ಲಾಮಾಬಾದ್‌ಗೆ ಬೂದುಪಟ್ಟಿಯಿಂದ ವಿನಾಯಿತಿ ಸಿಗಲಿದೆ.

ಇಲ್ಲದಿದ್ದರೆ ಆ ದೇಶಕ್ಕೆ ಕಪ್ಪು ಪಟ್ಟಿ ಖಚಿತ’ ಎಂದು ಎಫ್ಎಟಿಎಫ್ ಕಟುವಾಗಿ ಹೇಳಿದೆ. ಪಾಕ್‌ನ ಉಗ್ರ ನಡೆಗೆ ಈ ಸಭೆಯಲ್ಲಿ ನಿರ್ಣಾಯಕ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ ತೀವ್ರ ಅಸಮಾಧಾನ ಸೂಚಿಸಿವೆ.

ದಿಢೀರ್‌ ಪ್ರವಾಹದ ಅಲರ್ಟ್‌ ವ್ಯವಸ್ಥೆಗೆ ಚಾಲನೆ
ದಿಢೀರ್‌ ಪ್ರವಾಹ ಉಂಟಾ ಗುವ ಬಗ್ಗೆ 6-24 ಗಂಟೆ ಮುಂಚಿತವಾ ಗಿಯೇ ಅಲರ್ಟ್‌ ಮಾಡುವಂಥ ವ್ಯವಸ್ಥೆಗೆ ಭಾರತೀಯ ಹವಾಮಾನ ಇಲಾಖೆ
(ಐಎಂಡಿ)ಯ ಕಚೇರಿಯಲ್ಲಿ ಶುಕ್ರವಾರ ಚಾಲನೆ ನೀಡಲಾಗಿದೆ. ದಕ್ಷಿಣ ಏಷ್ಯಾದ ದೇಶಗಳಿಗೆ ಇದೇ ಮೊದಲ ಬಾರಿಗೆ ಇಂಥ ದ್ದೊಂದು ಸೌಲಭ್ಯವನ್ನು ಕಲ್ಪಿಸಲಾಗಿದೆ.

ಜಾಗತಿಕ ಹವಾಮಾನ ಇಲಾಖೆ (ಡಬ್ಲ್ಯುಎಂಒ) ಯು ದಕ್ಷಿಣ ಏಷ್ಯಾ ದಿಢೀರ್‌ ಪ್ರವಾಹ ಮಾರ್ಗದರ್ಶಿ ವ್ಯವಸ್ಥೆಯ ಪ್ರಾದೇಶಿಕ ಕೇಂದ್ರದ ಹೊಣೆಯನ್ನು ಭಾರತಕ್ಕೆ
ವಹಿಸಿದೆ. ಇದರ ಅನುಷ್ಠಾನದಲ್ಲಿ ಪರಸ್ಪರ ಸಮನ್ವಯತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಿದೆ. ಭಾರತವು ಈಗಾಗಲೇ ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳ ಕುರಿತ ಅಲರ್ಟ್‌ ಅನ್ನು ನೆರೆರಾಷ್ಟ್ರಗಳಿಗೂ ನೀಡುತ್ತದೆ.

Advertisement

ಹೊಸ ವ್ಯವಸ್ಥೆಯಿಂದಾಗಿ ಭಾರತ, ಶ್ರೀಲಂಕಾ, ಬಾಂಗ್ಲಾ, ನೇಪಾಳ, ಭೂತಾನ್‌ನಂತಹ ಸದಸ್ಯ ರಾಷ್ಟ್ರ ಗಳಿಗೆ ದಿಢೀರ್‌ ಪ್ರವಾಹ ಕುರಿತು ಮುಂಚಿತವಾಗಿಯೇ ಮಾಹಿತಿ ದೊರೆಯಲಿದೆ ಎಂದು ಐಎಂಡಿ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ತಿಳಿಸಿ ದ್ದಾರೆ. ಆನ್‌ಲೈನ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ ಸದಸ್ಯ ರಾಷ್ಟ್ರಗಳ  ಪ್ರತಿನಿಧಿಗಳೂ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next