Advertisement

ಎಫ್ಎಟಿಎಫ್ ಕಪ್ಪುಪಟ್ಟಿಗೆ ಸೇರ್ಪಡೆ: ಪಾಕ್‌ ಆತಂಕ

11:13 PM Apr 02, 2019 | sudhir |

ಲಾಹೋರ್‌: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ನಡೆಸುವ ತೆರೆಮರೆಯ ಪ್ರಯತ್ನಗಳಿಂದಾಗಿ, ಪಾಕಿಸ್ತಾನವು “ಫಿನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌’ನ (ಎಫ್ಎಟಿಎಫ್) ಕಪ್ಪುಪಟ್ಟಿಗೆ ಸೇರಬಹುದಾದ ಭೀತಿ ಆವರಿಸಿದೆ ಎಂದು ಪಾಕ್‌ ವಿದೇಶಾಂಗ ಸಚಿವ ಖುರೇಷಿ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಇತ್ತೀಚೆಗೆ, ಎಫ್ಎಟಿಎಫ್ನ “ಗ್ರೇ ಲಿಸ್ಟ್‌’ಗೆ ತಳ್ಳಪಟ್ಟಿದ್ದರಿಂದ ಪಾಕಿಸ್ತಾನವು ವಾರ್ಷಿಕವಾಗಿ ಎಫ್ಎಟಿಎಫ್ನಿಂದ ಪಡೆಯುತ್ತಿದ್ದ ಅನುದಾನದಲ್ಲಿ 68,000 ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎಂದು ಖುರೇಷಿ ತಿಳಿಸಿದ್ದಾರೆ. ದುರ್ಬಲ ಆಡಳಿತ ವ್ಯವಸ್ಥೆ ಹಾಗೂ ಉಗ್ರರಿಗೆ ಹಣ ಪೂರೈಕೆ ತಡೆಯುವಲ್ಲಿ ವಿಫ‌ಲವಾಗಿದ್ದ ಕಾರಣಕ್ಕಾಗಿ ಎಫ್ಎಟಿಎಫ್, ಪಾಕಿಸ್ತಾನವನ್ನು ಕಳೆದ ವರ್ಷ ಜೂನ್‌ನಲ್ಲಿ “ಗ್ರೇ ಲಿಸ್ಟ್‌’ಗೆ ತಳ್ಳಿತ್ತು. ಇದೀಗ, ಪುಲ್ವಾಮಾ ದಾಳಿ ನಂತರ, ಪಾಕಿಸ್ತಾನವು ತನ್ನ ನೆಲೆಯಲ್ಲಿರುವ ಉಗ್ರರನ್ನು ನಿಗ್ರಹಿಸುವ ವಿಚಾರದಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೊಳಗಾಗಿದೆ. ಎಫ್ಎಟಿಎಫ್ನ ಅವಕೃಪೆಗೆ ಒಳಗಾಗಿರುವ ಪಾಕಿಸ್ತಾನವನ್ನು ಭಾರತ, ಶತಾಯ ಗತಾಯ ಕಪ್ಪು ಪಟ್ಟಿಗೆ ಸೇರಿಸುವ ಪ್ರಯತ್ನ ಮಾಡುತ್ತಿರುವುದು ಪಾಕಿಸ್ತಾನಕ್ಕೆ ತಲೆನೋವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next