Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಹಿಂದೂಪರ ಹಾಗೂ ಬಿಜೆಪಿಯ ಒಟ್ಟು 12 ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ. ಇದರಲ್ಲಿ ಎಂಟು ಹತ್ಯೆಗಳಲ್ಲಿ ಪಿಎಫ್ಐ, ಕೆಎಫ್ಡಿ ಪ್ರೇರಿತ ಹತ್ಯೆಗಳಾಗಿದ್ದು, ಉಳಿದವು ರಾಜಕೀಯ ಕೊಲೆಯಾಗಿವೆ ಎಂದು ಆರೋಪಿಸಿದರು.
Related Articles
Advertisement
ಸಂಘಟನೆಗಳ ನಿಷೇಧ ಹಾಗೂ ಸಚಿವ ರಮಾನಾಥ ರೈ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ ಎಂದರು. ಸಚಿವ ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡುವುದು ಕಳ್ಳನ ಕೈಗೆ ಕೀಲಿ ಕೊಟ್ಟಂತಾಗಲಿದೆ ಎಂದು ಅವರು ಲೇವಡಿ ಮಾಡಿದರು. ಬಿಜೆಪಿ ಆಡಳಿತಾವಧಿಯಲ್ಲಿ ಬಳ್ಳಾರಿಯಲ್ಲಿನ ಕಾನೂನು ಸುವ್ಯವಸ್ಥೆ ಹಾಗೂ ಹಲವು ಹತ್ಯೆಗಳ ಕುರಿತಾಗಿ ಕೇಳಲಾದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿಲ್ಲ.
ಸ್ಪಷ್ಟನೆ ನೀಡಲಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ಅವರು, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವುದಾದರೆ ಮೊದಲು ಜೈ ಎನ್ನುವೆ ಎಂಬ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಲಿ ಎಂದು ಪ್ರತಾಪ ಸಿಂಹ ಒತ್ತಾಯಿಸಿದರು. ಮೆಟ್ರೋದಲ್ಲಿ ಹಿಂದಿಬಳಕೆ ಕುರಿತಾಗಿ ದೊಡ್ಡ ಆರೋಪ ಮಾಡಿದ್ದ ಕನ್ನಡ ನಾಯಕರು ಇದೀಗ ತಮ್ಮದೇ ಪಕ್ಷದ ನಾಯಕಿಯ ಮನದಲ್ಲಿನ ಕನ್ನಡ ವಿರೋಧಿ ಭಾವನೆ ಬಗ್ಗೆ ಏನೆಂದು ಉತ್ತರಿಸಬೇಕಿದೆ ಎಂದರು.