Advertisement

ಜನ ಜಾಗೃತಿಗಾಗಿ ಉಪವಾಸ ಸತ್ಯಾಗ್ರಹ

08:10 AM May 31, 2020 | Suhan S |

ತೀರ್ಥಹಳ್ಳಿ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ತಾರತಮ್ಯ ನೀತಿ, ಆಡಳಿತ ವೈಫಲ್ಯದ ಕುರಿತು ಜನ ಜಾಗೃತಿಗಾಗಿ ಜೂನ್‌ 1ರಂದು ತಾಲೂಕು ಕಚೇರಿ ಮುಂಭಾಗ ಉಪವಾಸ ಕುಳಿತುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ತಿಳಿಸಿದರು.

Advertisement

ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಮುಖಂಡರ ಷಡ್ಯಂತ್ರ ಹಾಗೂ ಚಿತಾವಣೆಯಿಂದ ದಾಖಲಿಸಿರುವ ರಾಜಕೀಯ ಪ್ರೇರಿತ ಎಫ್‌ಐಆರ್‌ ಅನ್ನು ರದ್ದುಪಡಿಸುವಂತೆ ಆಗ್ರಹಪಡಿಸಿದರು. ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಮಾಡಿರುವ ಕೋಮು ಪ್ರಚೋದನೆ ಭಾಷಣದ ವಿರುದ್ಧ ಭಾರತ ದಂಡ ಸಂಹಿತೆ ಪ್ರಕಾರ ಸ್ವಯಂಪ್ರೇರಿತ ದೂರು ದಾಖಲು ಮಾಡಬೇಕು ಎಂದರು.

ರಾತ್ರೋರಾತ್ರಿ ಮರಳು ಕಳ್ಳತನ ಮಾಡುವ ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರೇ? ಹೊಸಳ್ಳಿ, ಹೊಸನಗರ, ಮುಂಡುವಳ್ಳಿ ಕ್ವಾರೆಗಳಿಗೆ ಏಕೆ ಜ್ಞಾನೇಂದ್ರ ಭೇಟಿ ನೀಡುವುದಿಲ್ಲ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಸ್ತೂರು ಮಂಜುನಾಥ್‌, ವಿಶ್ವನಾಥ್‌ ಶೆಟ್ಟಿ ಮತ್ತಿತರ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next