Advertisement

ಗೂಗಲ್‌ನಲ್ಲೂ ಶೀಘ್ರ AI ಸೇವೆ

01:05 AM May 07, 2023 | Team Udayavani |

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ)ಚಾಟ್‌ ಜಿಪಿಟಿಗೆ ಇತ್ತೀಚೆಗಷ್ಟೇ ದೊರೆತ ಮಾನ್ಯತೆಯ ಬೆನ್ನಲ್ಲೇ, ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಬಳಕೆದಾರರಿಗೂ ಎಐ ತಂತ್ರಜ್ಞಾನ ಸೇವೆ ಒದಗಿಸಲು ಯೋಜಿಸಿದೆ. ಈ ಮೂಲಕ ಗೂಗಲ್‌ ಅನ್ನು ಇನ್ನೂ ಹೆಚ್ಚು ಬಳಕೆದಾರ ಸ್ನೇಹಿ, ಖಚಿತ ಉತ್ತರಗಳನ್ನು ತೀಕ್ಷಣವಾಗಿ, ಸರಳವಾಗಿ ಹಾಗೂ ಪರಿಣಾಕಾರಿಯಾಗಿ ಒದಗಿಸಲಿದೆ.

Advertisement

ಮುಂದಿನ ವಾರ ನಡೆಯಲಿರುವ ಡೆವಲಪರ್‌ಗಳ ವಾರ್ಷಿಕ ಸಭೆಯಲ್ಲಿ ಎಐ ಪ್ರೋಗ್ರಾಂ ಆಧಾರಿತ “ಮಗಿ’ ಎನ್ನುವ ಸೇವೆಯನ್ನು ಆರಂಭಿಸಲು ಯೋಜಿಸಲಾಗಿದೆ. ಇದು ಪ್ರಸಕ್ತ ಗೂಗಲ್‌ನಲ್ಲಿ ಬಳಕೆಯಲ್ಲಿರುವ ಸರ್ಚ್‌ ರಿಸಲ್ಟ್‌ಗಳನ್ನು ಪ್ರತಿನಿಧಿಸುವ “ಟೆನ್‌ ಬ್ಲೂ ಲೈನ್‌’ ವ್ಯವಸ್ಥೆಯನ್ನು ಬದಲಿಸಲಿದೆ. ಇದರ ಬದಲಿಗೆ ಇನ್ನುಮುಂದೆ ಯಾವುದೇ ಪ್ರಶ್ನೆಗಳಿಗೆ ಮನುಷ್ಯರ ಧ್ವನಿ ಅತೀ ಕಡಿಮೆ ಸಮಯದಲ್ಲಿ ಉತ್ತರಿಸಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ವಿಶೇಷವಾಗಿ ಯುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು, ಈ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next