Advertisement
ಫಾಸ್ಟ್ ಟ್ಯಾಗ್ ನ್ನು ಜನವರಿ ಆರಂಭದಲ್ಲೆ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿತ್ತು, ಆದರೇ, ವಾಹನ ಸವಾರರಿಗೆ ಸ್ವಲ್ಪ ವಿನಾಯಿತಿ ನೀಡುವ ದೃಷ್ಟಿಯಿಂದ ಅದನ್ನು ಫೆಬ್ರವರಿ 15ಕ್ಕೆ ಮುಂದೂಡಲಾಗಿದೆ. ಫೆ. 15ರಿಂದ ಯಾವ ವಾಹನ ಸವಾರರಿಗೂ ಫಾಸ್ಟ್ ಟ್ಯಾಗ್ ಇಲ್ಲದಿದ್ದರೇ ವಿನಾಯಿತಿಯಿಲ್ಲ. ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದೇ ಇರುವ ವಾಹನ ಸವಾರರಿಗೆ ದುಪ್ಪಟ್ಟು ತೆರಿಗೆ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
Related Articles
Advertisement
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2019 ರಲ್ಲಿ ಈ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಪ್ರಾರಂಭಿಸಿತು. ಪ್ರಾಧಿಕಾರದ ಪ್ರಕಾರ, ಈಗ ಫಾಸ್ಟ್ ಟ್ಯಾಗ್ ನ ಬಳಕೆ ಶೇಕಡಾ 75 ರಿಂದ 80ರಷ್ಟಉ ವಾಹನಗಳಲ್ಲಿ ಬಳಸಲಾಗುತ್ತಿದೆ. ಫೆಬ್ರವರಿ 15ರಿಂದ ಅದನ್ನು 100 ಪ್ರತಿಶತದಷ್ಟು ತರಲು ಸರ್ಕಾರ ನಿರ್ಧರಿಸಿದೆ.
ಫಾಸ್ಟ್ ನ್ನು ಹೇಗೆ ಅಳವಡಿಸಿಕೊಳ್ಳಬಹುದು ಮತ್ತು ಅದರ ಬೆಲೆ ಎಷ್ಟು…?
ಇದು ಎರಡು ವಿಷಯಗಳ ಆಧಾರದಲ್ಲಿ ನಿರ್ಧಾರವಾಗುತ್ತದೆ. ಮೊದಲನೆಯದು ವಾಹನಗಳ ವರ್ಗ, ಎರಡನೆಯದು ವಾಹನ ಎಲ್ಲಿ ರಿಜಿಸ್ಟ್ರೇಶನ್ ಆಗಿದೆ ಎಂಬುದನ್ನು ನೋಡಿ ನಿರ್ಧರಿಸಲಾಗುತ್ತದೆ. ನೀವು ಫಾಸ್ಟ್ ಟ್ಯಾಗ್ ನ್ನು ಬಸ್, ಕಾರು, ಟ್ರಕ್ ಅಥವಾ ಇತರೆ ವಾಹನಗಳಿಗಾಗಿ ಖರೀದಿಸುತ್ತಿದ್ದರೇ ಪ್ರತಿ ಬ್ಯಾಂಕ್ ಗಳಲ್ಲಿ ವಿಭಿನ್ನ ನೀತಿ ಇದೆ. ನೀವು ನಿಮ್ಮ ಕಾರಿಗೆ ಫಾಸ್ಟ್ ಟ್ಯಾಗ್ ನ್ನು ಅಳವಡಿಸುತ್ತಿದ್ದರೇ, ಅದನ್ನು Paytm ಮೂಲಕವ 500ರೂ ಗೆ ಖರೀದಿಸಬಹುದಾಗಿದೆ. ಅಮೇಜ್ಹಾನ್ ಹಾಗೂ ಸ್ನ್ಯಾಪ್ ಡೀಲ್ ಗಳಲ್ಲಿಯೂ ಕೂಡ ಖರೀದಿಸಬಹುದಾಗಿದೆ.
ಓದಿ : ಕುಲ್ಗಾಮ್ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಉಗ್ರ ನಂಟು? ಲಶ್ಕರ್ ಉಗ್ರ ಜಹೂರ್ ಅಹಮದ್ ಬಂಧನ