Advertisement

ಇನ್ನೂ ಫಾಸ್ಟ್ಯಾಗ್ ಪಡೆದುಕೊಂಡಿಲ್ಲವೇ ಪಡೆಯೋದು ಹೇಗೆ

10:11 AM Dec 21, 2019 | Team Udayavani |

ಹೆದ್ದಾರಿ ಟೋಲ್‌ಗ‌ಳಲ್ಲಿ ಸುಂಕ ನೀಡುವ ಬದಲಿಗೆ ಫಾಸ್ಟ್ಯಾಗ್ ಮೂಲಕ ಸ್ವಯಂಚಾಲಿತವಾಗಿ ಸುಂಕ ಪಾವತಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು , ಕಡ್ಡಾಯ ದಿನಾಂಕವನ್ನು ಜ.15ರ ವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಡಿ.15ರವರೆಗೆ ಗಡುವು ನೀಡಿದ್ದು, ಫಾಸ್ಟ್ಯಾಗ್ ಪಡೆಯಲು ವಿವಿಧ ಟೋಲ್‌ಗ‌ಳಲ್ಲಿ ಸುಂಕ ನೀಡುವ ವಿಚಾರದಲ್ಲಿ ಗೊಂದಲವಾಗಿತ್ತು. ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್ ಇನ್ನೂ ಪಡೆದುಕೊಳ್ಳದವರು ಎಲ್ಲೆಲ್ಲಿ ಪಡೆದು ಕೊಳ್ಳಬಹುದು? ಪಡೆದುಕೊಳ್ಳುವುದಕ್ಕೆ ದಾಖಲೆ ಏನು ಬೇಕು ಎಂಬ ಕುರಿತ ವಿವರ ಇಲ್ಲಿದೆ.

Advertisement

ಎಲ್ಲೆಲ್ಲಿ ಲಭ್ಯ?
ಸಾರ್ವಜನಿಕ, ಖಾಸಗಿ ರಂಗದ ಪ್ರಮುಖ 23 ಬ್ಯಾಂಕುಗಳು, ಪೇಟಿಎಂ, ಫ್ಲಿಪ್‌ಕಾರ್ಟ್‌ ಇತ್ಯಾದಿ ಮೊಬೈಲ್‌ ವ್ಯಾಲೆಟ್‌ಗಳು, ಟೋಲ್‌ ಪ್ಲಾಜಾಗಳು, ಆಯ್ದ ಪೆಟ್ರೋಲ್‌ ಪಂಪ್‌ಗಳು, ಗ್ರಾಹಕ ಸೇವಾ ಕೇಂದ್ರಗಳು, ರಾ.ಹೆ. ಪ್ರಾಧಿಕಾರ ಪ್ರಾದೇಶಿಕ ಕಚೇರಿಗಳಲ್ಲಿ ಫಾಸ್ಟಾಗ್‌ಗಳು ದೊರೆಯಲಿವೆ.

ಏನೆಲ್ಲಾ ಬೇಕು?
ಫಾಸ್ಟಾಗ್‌ ಪ್ರಿಪೇಯ್ಡ್ ರಿಚಾರ್ಜ್‌ ಮಾಡಬಹುದಾದ ಟ್ಯಾಗ್‌ ಆಗಿದ್ದು, ನಿಮ್ಮ ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡಿರುವ ಕೆವೈಸಿ ಸಾಕ್ಷ್ಯ ಪತ್ರಗಳ ಅಗತ್ಯವಿದೆ. ಜತೆಗೆ ಫಾಸ್ಟಾಗ್‌ ಅರ್ಜಿಯೊಂದಿಗೆ ವಾಹನ ನೋಂದಣಿ (ಆರ್‌ಸಿ) ಮತ್ತು ನಿಮ್ಮ ಗುರುತಿನ ಚೀಟಿ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.

ಖರೀದಿ ಹೇಗೆ
ಕಾರಿನ ಆರ್‌ಸಿ ದಾಖಲೆ ಇರುವ ಹೆಸರಿನಲ್ಲೇ ಫಾಸ್ಟಾಗ್‌ ಖರೀದಿ ಮಾಡ ಬೇಕಾಗುತ್ತದೆ. ಕಾರಿನ ನಂಬರ್‌, ಮಾಲಕರ ಹೆಸರನ್ನು ಮತ್ತು ಬಳಕೆಯಲ್ಲಿರುವ ಫೋನ್‌ ನಂಬರ್‌ ಅನ್ನು ಅರ್ಜಿಯಲ್ಲಿ ನೀಡಬೇಕಾಗುತ್ತದೆ.

ಖರ್ಚೆಷ್ಟು?
ಟ್ಯಾಗ್‌ ಖರೀದಿ ವೇಳೆ 200 ರೂಪಾಯಿಗಳಷ್ಟು ವೆಚ್ಚವಾಗಲಿದೆ. ಮರು ಪಾವತಿಸಬಹುದಾದ ಠೇವಣಿಯನ್ನೂ ಪಾವತಿಸಬೇಕಾಗುತ್ತದೆ. ಫಾಸ್ಟಾಗ್‌ಗೆ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಮೂಲಕ ಅಥವಾ ನೆಟ್‌ ಬ್ಯಾಂಕಿಂಗ್‌ ಮೂಲಕ ರೀಚಾರ್ಜ್‌ ಮಾಡಬಹುದು. ಕನಿಷ್ಠ ರೀಚಾರ್ಜ್‌ ಮೊತ್ತ 200 ರೂ., ಗರಿಷ್ಠ ಮೊತ್ತ 1 ಲಕ್ಷ ರೂ. ಎಂದು ನಿಗದಿ ಪಡಿಸಲಾಗಿದೆ. ಖಾತೆಗಳನ್ನು ಟ್ರ್ಯಾಕ್‌ ಮಾಡಲು ಫಾಸ್ಟಾಗ್‌ ವೆಬ್‌ ಪೋರ್ಟಲ್‌ ಆ್ಯಪ್‌ ಕೂಡ ಇದೆ.

Advertisement

ವ್ಯಾಲಿಡಿಟಿ
ಫಾಸ್ಟಾಗ್‌ ಅನಿಯಮಿತ ವ್ಯಾಲಿಡಿಟಿಯನ್ನು ಹೊಂದಿದ್ದು, ಟ್ಯಾಗ್‌ನಲ್ಲಿರುವ ಬಾಕಿ ಮೊತ್ತವನ್ನು ಮುಂದಿನ ಪ್ರಯಾಣಗಳಿಗೆ ಬಳಕೆ ಮಾಡಬಹುದು.

ಈಗಾಗಲೇ ಇದ್ದರೆ?
2017ರ ಅನಂತರದ ಹೊಸ ವಾಹನಗಳಲ್ಲಿ ಸ್ಥಾಪಿಸಲಾದ ಎÇÉಾ ಫಾಸ್ಟಾಗ್‌ಗಳಿಗೆ ಮಾನ್ಯತೆ ಇರುತ್ತದೆ. ಕಾರು ಖರೀದಿ ವೇಳೆ ಈ ಬಗ್ಗೆ ಯಾವುದೇ ಎಸ್‌ಎಂಎಸ್‌ಗಳು ಬರದೇ ಇದ್ದರೆ, ಫಾಸ್ಟಾಗ್‌ ಸಂಖ್ಯೆಯನ್ನು, ಫಾಸ್ಟಾಗ್‌ನಲ್ಲಿ ಬರೆದಿರುವ ಬ್ಯಾಂಕ್‌ ಹೆಸರನ್ನು ಎನ್‌ಎಚ್‌ಎಐ ಸಹಾಯವಾಣಿ ಸಂಖ್ಯೆ 1033ಗೆ ಕರೆ ಮಾಡಿ ತಿಳಿಸಿ ಟ್ಯಾಗ್‌ನ ಮಾನ್ಯತೆ ಪಡೆಯಬಹುದು.

ಬದಲಾಯಿಸಬಹುದೇ?
ಫಾಸ್ಟಾಗ್‌ ಒಂದು ಬ್ಯಾಂಕಿನಿಂದ ನೀಡಿದ್ದರೆ ಅದನ್ನು ಇನ್ನೊಂದು ಬ್ಯಾಂಕ್‌ಗೆ ಬದಲಾಯಿಸಲು ಬರುವುದಿಲ್ಲ. ಆದರೆ ಈಗಿರುವ ಫಾಸ್ಟಾಗ್‌ ಖಾತೆಯನ್ನು ತೆರವುಗೊಳಿಸಿ ನೀವು ಬಯಸುತ್ತಿರುವ ಬ್ಯಾಂಕ್‌ನಿಂದ ಹೊಸ ಫಾಸ್ಟಾಗ್‌ ಖರೀದಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next