Advertisement

ಫ್ಯಾಷನ್‌ ಸೈನ್ಸ್‌

03:19 PM Sep 30, 2020 | mahesh |

ವಿಜ್ಞಾನಿಗಳು, ವಿಜ್ಞಾನದ ವಿದ್ಯಾರ್ಥಿಗಳು ಎಂದಾಗ ಲ್ಯಾಬ್‌ ಕೋಟ್‌, ದಪ್ಪ ಪ್ರೇಮ್‌ನ ಕನ್ನಡಕ, ಏಪ್ರನ್‌, ಕೈಗೆ ಗ್ಲೌಸ್‌ ನೆನಪಿಗೆ ಬರುತ್ತದೆ. ಸಿನಿಮಾಗಳಲ್ಲಿ, ಕಾಮಿಕ್‌ ಬುಕ್‌ಗಳಲ್ಲಿ ಇವರನ್ನು ಈ ರೀತಿಯೇ ತೋರಿಸಲಾಗುತ್ತದೆ. ಆದರೆ, ನಾವು ಕೂಡಾ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬಲ್ಲೆವು. ಅಷ್ಟೇ ಅಲ್ಲ, ವಿಜ್ಞಾನದ ಮೇಲಿನ ಪ್ರೀತಿಯನ್ನು ಫ್ಯಾಷನ್‌ ಮೂಲಕ ವ್ಯಕ್ತಪಡಿಸಬಲ್ಲೆವು ಅಂತಿದ್ದಾರೆ ಮಹಿಳಾ ವಿಜ್ಞಾನಿಗಳು ಮತ್ತು ವಿಜ್ಞಾನದ ವಿದ್ಯಾರ್ಥಿನಿಯರು.

Advertisement

ಇದೀಗ, ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಪಟ್ಟ ಈಕ್ವೇಶನ್‌ (ಸಮೀಕರಣ), ಡಿರೈವೇಶನ್‌ (ವ್ಯುತ್ಪತ್ತಿ), ಥಿಯರಮ್‌ (ಪ್ರಮೇಯ), ಪಿರಿಯಾಡಿಕ್‌ ಟೇಬಲ್‌ (ಆವರ್ತಕ ಕೋಷ್ಟಕ), ವೈಜ್ಞಾನಿಕ ಉಪಕರಣಗಳ ಚಿತ್ರಗಳು, ವಿಜ್ಞಾನಿಗಳ ಚಿತ್ರ, ಇತ್ಯಾದಿ ಚಿತ್ತಾರಗಳುಳ್ಳ ಮಹಿಳೆಯರ ಉಡುಪಿಗೆ ಬೇಡಿಕೆ ಹೆಚ್ಚಾಗಿದೆ. ನಿಮ್ಮ ಆಯ್ಕೆಯ ಬಣ್ಣದ ಉಡುಗೆಯ ಮೇಲೆ ನಿಮಗೆ ಬೇಕಾದ ಚಿತ್ರ ಅಥವಾ ಬರಹವನ್ನು ಪ್ರಿಂಟ್‌ ಮಾಡಿಸಬಹುದು. ಈ ರೀತಿ ಮಾಡಿಕೊಡುವ ಅಂಗಡಿಗಳು ಮಾರುಕಟ್ಟೆಯಲ್ಲಿ ಇವೆ. ಆನ್‌ಲೈನ್‌ ಮೂಲಕವೂ ಕಸ್ಟಮೈಸ್ಡ್ ಉಡುಗೆ ಮಾಡಿಸಬಹುದು.

ಪಾರ್ಟಿ, ಹುಟ್ಟುಹಬ್ಬಕ್ಕೆ ಉಡುಗೊರೆ, ಇತ್ಯಾದಿಗಳಿಗೆ ಈ ರೀತಿಯ ಡ್ರೆಸ್‌ಗಳನ್ನು ನೀಡಬಹುದು. ಎಂಜಿನಿಯರಿಂಗ್‌, ವೈದ್ಯಕೀಯ, ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಸೇರಿದಂತೆ ವಿಜ್ಞಾನ ಕಲಿಯುವ ವಿದ್ಯಾರ್ಥಿಗಳು ಇಂಥ ಉಡುಪುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ನರ್ಡ್‌ ಫ್ಯಾಷನ್‌
ವಿಜ್ಞಾನ ವಿದ್ಯಾರ್ಥಿಗಳನ್ನು ಗೀಕ್‌, ನರ್ಡ್‌ ಎಂದೆಲ್ಲಾ ತಮಾಷೆಯಿಂದ ಕರೆಯಲಾಗುತ್ತದೆ. ಹಾಗಾಗಿ ಇಂಥ ಫ್ಯಾಷನ್‌ಗೆ “ನರ್ಡ್‌ ಫ್ಯಾಷನ್‌’ ಎಂದೂ ಹೇಳಲಾಗುತ್ತದೆ! ಇದನ್ನು ಫಾಲೋ ಮಾಡುವ ಹುಡುಗಿಯರನ್ನು “ಗೀಕೀ ಗರ್ಲ್’ ಎನ್ನುತ್ತಾರೆ. ಇಂಥ ಉಡುಗೆ ತೊಟ್ಟು ಫ್ಯಾಷನೆಬಲ್‌ ಆಗಿಯೂ ಕಾಣಬಹುದು ಎಂದು ಮಹಿಳೆಯರು ಜಗಕೆ ತೋರಿಸಿಕೊಡುತ್ತಿದ್ದಾರೆ.

– ಅದಿತಿಮಾನಸ ಟಿ.ಎಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next