Advertisement
ಹಬ್ಬದ ದಿನದಂದು ವಿಶೇಷ ಪೂಜೆ ಪುನಸ್ಕಾರಗಳು ಇರುವುದರಿಂದ ಹೆಚ್ಚು ಹೊತ್ತು ಕುಳಿತು ಹೇರ್‌ಸ್ಟೈಲ್ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಕೇವಲ 5 ನಿಮಿಷದಲ್ಲಿ ಸೂಪರ್ ಟ್ರೆಂಡಿ ಹೇರ್ ಸ್ಟೈಲ್ ಮಾಡಿಕೊಳ್ಳೋದು ಹೇಗೆ ಎಂಬುದನ್ನು ತಿಳಿಕೋಳ್ಳೋಣ…
Related Articles
Advertisement
ಜಿಗ್ ಜ್ಯಾಗ್ ಹೇರ್ ಸ್ಟೈಲ್ ಹಬ್ಬಕ್ಕೆ ಸೂಟ್ ಆಗುತ್ತೆ:
ಮತ್ತೊಂದು ಸುಲಭವಾದ ಮತ್ತು ಟ್ರೆಂಡಿ ಹೇರ್ ಸ್ಟೈಲ್ ಎಂದರೆ ಜಿಗ್ ಜ್ಯಾಗ್ ಹೇರ್ ಸ್ಟೈಲ್. ಇದು ನೋಡಿದಾಗ ಸ್ವಲ್ಪ ಕಷ್ಟ ಎನಿಸಬಹುದು, ಆದರೆ ಇದನ್ನು ಮಾಡಿಕೊಳ್ಳುವುದು ಬಹಳ ಸುಲಭ, ಕೇವಲ 3 ನಿಮಿಷದಲ್ಲಿ ಇದನ್ನು ಮಾಡಬಹುದು. ಆದರೆ ನಿಮಗೆ ಹೇರ್ ಸ್ಟೈಲ್ ಮಾಡಿಕೊಂಡು ಅಭ್ಯಾಸವಿಲ್ಲದಿದ್ದರೆ, ಸ್ವಲ್ಪ ಕಷ್ಟವಾಗಬಹುದು. ಮೊದಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಸಿಕ್ಕು ಇಲ್ಲದಂತೆ ನೋಡಿಕೊಳ್ಳಿ.
ನಂತರ ಮುಂದಿನ ಸ್ವಲ್ಪ ಕೂದಲನ್ನು ತೆಗೆದುಕೊಂಡು ಹಿಂದೆ ಹಾಕಿ ಹೇರ್ ಪಿನ್ ಹಾಕಿ. ನಂತರ ಹಿಂದಿನ ಸ್ವಲ್ಪ ಕೂದಲನ್ನು ಮುಂದೆ ಹಾಕಿ. ಹೀಗೆ ಒಂದು ಮುಂದೆ, ಇನ್ನೊಂದು ಹಿಂದೆ ಜಿಗ್ ಜ್ಯಾಗ್ ರೀತಿ ಹಾಕಿ. ನಂತರ ಮುಂದೆ ಉಳಿದಿರುವ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ.
ಬಳಿಕ ಕೂದಲನ್ನು ಒಂದು ಸೈಡ್ಗೆ ಹಾಕಿ ನೀಟಾಗಿ ಪಿನ್ ಮಾಡಿ ಸಾಕು. ಈ ಲುಕ್ ನಿಮ್ಮ ಸೀರೆ, ಚೂಡಿದಾರ ಹೀಗೆ ಎಲ್ಲಾ ಬಟ್ಟೆಗೂ ಸೂಪರ್ ಆಗಿ ಸೂಟ್ ಆಗುತ್ತದೆ. ನಿಮ್ಮ ಕೂದಲು ಸುರುಳಿ ಇದ್ದಲ್ಲಿ ಸ್ವಲ್ಪ ಹೇರ್ ಸ್ಟ್ರೈಟನಿಂಗ್ ಮಾಡಿಕೊಳ್ಳುವುದು ಉತ್ತಮ.
ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್ ಹೇರ್ ಸ್ಟೈಲ್:
ನಿಮ್ಮ ಕೂದಲಿನ ವಿನ್ಯಾಸವು ನೈಸರ್ಗಿಕವಾಗಿದ್ದರೆ ಈ ಕೇಶ ವಿನ್ಯಾಸ ನಿಮಗೆ ಸೂಪರ್ ಆಗಿ ಹೊಂದುತ್ತದೆ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಿಲ್ಲ. ಜಸ್ಟ್ ಕೂದಲನ್ನು ಅರ್ಧ ಗಂಟು ಹಾಕಿ ಅದನ್ನು ಒಂದು ಸುತ್ತು ಹಾಕಿ ಪಿನ್ ಹಾಕಿದರೆ ಮುಗೀತು. ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್ ಹೇರ್‌ಸ್ಟೈಲ್ ಸಿದ್ಧವಾಗುತ್ತದೆ.
ಹೂಪ್ಡ್ ಲೋ ಬನ್ ಹೇರ್ ಸ್ಟೈಲ್:
ಈ ಹೇರ್‌ಸ್ಟೈಲ್ ಸಾಂಪ್ರದಾಯಿಕ ಬಿಗಿಯಾದ ಬನ್‌ಗೆ ಸವಾಲು ನೀಡುವ ಹಾಗೂ ಅತ್ಯಂತ ಸುಲಭವಾಗಿ ಈ ಕೇಶ ವಿನ್ಯಾಸ ಮಾಡಿಕೊಳ್ಳಬಹುದು. ಈ ಹೂಪ್ಡ್ ಲೋ ಬನ್ ಹೇರ್‌ಸ್ಟೈಲ್ ಬಹಳ ಸಮಯದವರೆಗೆ ತುಂಬಾ ನೀಟಾಗಿ ಇರುತ್ತದೆ ಮತ್ತು ಬಿಸಿಲಿನ ಕಾಲದ ಕಾರ್ಯಕ್ರಮಗಳಿಗೆ ಇದು ಹೇಳಿ ಮಾಡಿಸಿದ ಕೇಶ ವಿನ್ಯಾಸವಾಗಿದೆ.
*ಶ್ವೇತಾ.ಮುಂಡ್ರುಪ್ಪಾಡಿ