Advertisement

ಎಫ್ಆರ್‌ಪಿ ದರ ನೀಡಿಕೆ ಆದೇಶಕ್ಕೆ  ರೈತರ ವಿಜಯೋತ್ಸವ  

04:48 PM Nov 15, 2018 | |

ಐನಾಪುರ: ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿ ಹಾಗೂ ಕಳೆದ ಹಂಗಾಮಿನ ಬಾಕಿ ಹಣ ನೀಡಬೇಕು ಎಂದು ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾನೆಗಳಿಗೆ ಗುಡುವು ನೀಡಿರುವುದು ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ ಗಾಣಿಗೇರ ಹೇಳಿದರು.

Advertisement

ಬುಧವಾರ ಸಂಜೆ ಉಗಾರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಏರ್ಪಡಿಸಿದ್ದ ವಿಜಯೋತ್ಸವ ಸಭೆಯಲ್ಲಿ ಅವರು ಮಾತನಾಡಿ, ಕಬ್ಬಿನ ಬಾಕಿ ಬಿಲ್‌ ಹಾಗೂ ಸೂಕ್ತ ದರಕ್ಕೆ ಒತ್ತಾಯಿಸಿ ಈ ಭಾಗದ ರೈತರು 18 ದಿನಗಳಿಂದ ನಡೆಸುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿಯಲ್ಲಿ ರೈತ ಮುಖಂಡರು, ಸಕ್ಕರೆ ಕಾರ್ಖಾನೆಗಳ ಮಾಲೀಕರು-ಆಡಳಿತ ಮಂಡಳಿಯವರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಮೂರು ದಿನಗಳ ಗಡುವು ನೀಡಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಸಂತಸ ಮೂಡುವಂತಾಗಿದೆ ಎಂದರು.

ರೈತ ಮುಖಂಡ ಶೀತಲಗೌಡ ಪಾಟೀಲ ಮಾತನಾಡಿ, ಕಬ್ಬಿನ ಬಾಕಿ ಹನ ನೀಡುವ ಕುರಿತು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು ಕೊನೆಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಆಡಳಿತ ಮಂಡಳಿಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ರೈತರಿಗೆ ಖುಷಿ ತಂದಿದ್ದಾರೆ ಎಂದರು.

ಈ ವೇಳೆ ಉಗಾರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ನಡೆದ ವಿಜಯೋತ್ಸವ ಸಭೆಯಲ್ಲಿ ಶಶಿಕಾಂತ ಜೋಷಿ, ಗಜಾನನ ಯರಂಡೋಲಿ, ರಾವಸಾಹೇಬ ಪಾಟೀಲ,ಅಪ್ಪಾಸಾಬ ಚೌಗುಲಾ, ಸಂಜಯ ಭಿರಡಿ, ಆದಿನಾಥ ದಾನೊಳ್ಳಿ ಕುಮಾರ ಅಪರಾಜ, ವಿಶ್ವನಾಥ ನಾಮದಾರ, ಚಿದಾನಂದ ಡೂಗನವರ, ಯಶವಂತ ಪಾಟೀಲ, ಪ್ರಕಾಶ ಹಳ್ಳೊಳ್ಳಿ, ಬಾಹುಬಲಿ ಕುಸನಾಳೆ, ಅಣ್ಣಾಸಾಬ ಡೂಗನವರ, ಪ್ರವೀಣ ಕುಲಕರ್ಣಿ ಸೇರದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next