Advertisement

ಭೂತಾನ್ ನಿಂದ ಅಡಕೆ ಆಮದು ಮಾಡಿದರೂ ರೈತರಿಗೆ ಆತಂಕ ಬೇಡ: ಆರಗ ಜ್ಞಾನೇಂದ್ರ

01:00 PM Sep 30, 2022 | Team Udayavani |

ಬೆಂಗಳೂರು: ನೆರೆಯ ದೇಶ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿದ ಕೇಂದ್ರದ ನಿರ್ಧಾರದಿಂದ, ದೇಶಿಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಪ್ರಸ್ತುತ ನಮ್ಮ ದೇಶದಿಂದ ಭೂತಾನ್ ದೇಶಕ್ಕೆ, ಸಂಸ್ಕರಿತ ಅಡಕೆ ಉತ್ಪನ್ನಗಳು, ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದ್ದು, ಭೂತಾನ್ ನಿಂದ ಕೇವಲ ಹಸಿ ಅಡಕೆಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.

ನೆರೆಯ ಭೂತಾನ್ ದೇಶವು, ಭಾರತದ ಪರಂಪರಾಗತ ಮಿತ್ರ ದೇಶವಾಗಿದ್ದು, ಉಭಯ ದೇಶಗಳ ನಡುವೆ ಉತ್ತಮ ವಾಣಿಜ್ಯ ವಹಿವಾಟು ನಡೆಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ನಾಗರ ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಉರಗ ರಕ್ಷಕ!

ಅಡಕೆ ಮಾರುಕಟ್ಟೆಯಲ್ಲಿ, ಸ್ಥಿರತೆಯನ್ನು ಕಾಯ್ದುಕೊಳ್ಳಲು, ಕೇಂದ್ರ ಸರಕಾರದ ಜತೆಗೆ ಸತತ ಸಂಪರ್ಕದಲ್ಲಿದ್ದು, ಭೂತಾನ್ ಅಡಕೆ ಆಮದು ವಿಚಾರವಾಗಿಯೂ, ಮಾತುಕತೆ ನಡೆಸಲಾಗುವುದು. ಬೆಳೆಗಾರರಿಗೆ ಯಾವುದೇ ಗೊಂದಲ ಆತಂಕ ಬೇಡ. ಈ ವಿಚಾರ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದು ಸಚಿವರು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next