ಮಾಡುವಷ್ಟರ ಮಟ್ಟಿಗೆ ಸ್ವಾವಲಂಬನೆ ಸಾ ಧಿಸುವುದಿಲ್ಲವೋ ಅಲ್ಲಿಯವರೆಗೆ ಬೆಲೆಯಲ್ಲಿ ವಂಚನೆ ತಪ್ಪುವುದಿಲ್ಲ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ| ಟಿ.ಎನ್.ಪ್ರಕಾಶ ಕಮ್ಮರಡಿ ಹೇಳಿದರು.
Advertisement
ಐಸಿಎಆರ್ ಪ್ರಾಯೋಜಿತ ಕೃಷಿ, ಕೈತೋಟ, ಪಶುಸಂಗೋಪನೆ ಹಾಗೂ ಅರಣ್ಯ ಉತ್ಪನ್ನಗಳ ಆಧುನಿಕ ಮಾರುಕಟ್ಟೆ ಪದ್ಧತಿ ಕುರಿತ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನಲ್ಲಿ ಆಯೋಜಿಸಿದ 10 ದಿನಗಳ ಕಾರ್ಯಾಗಾರ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 1969ರಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಲಾಯಿತು. ಇಂದು ಬ್ಯಾಂಕುಗಳ ರಾಷ್ಟ್ರೀಕರಣದ ವಿಶೇಷ ದಿನ. ಗ್ರಾಮೀಣ ಪ್ರದೇಶದ ಕೃಷಿಕರಿಗೆ ಆರ್ಥಿಕ ಸೌಲಭ್ಯ ನೀಡುವುದು ಅತ್ಯಗತ್ಯ. ಶೇ.76ರಷ್ಟು ರೈತರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್ ಗಳ ಮೂಲಕ ಹಣಕಾಸಿನ ನೆರವು ಪಡೆದರೆ ಇನ್ನು ಶೇ.24ರಷ್ಟು ರೈತರು ಖಾಸಗಿ ಸಾಲಗಾರರು ಹಾಗೂ ಅವರ ಸಂಬಂಧಿ ಕರಲ್ಲಿ ಹಣಕಾಸಿನ ನೆರವು ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದರು.
ಮಾರುಕಟ್ಟೆ ಬಗ್ಗೆ ರೈತರಿಗೆ ತರಬೇತಿ ನೀಡಿ ಅವರ ಬೆಳೆಗೆ ತಾವೇ ದರ ನಿಗದಿಪಡಿಸುವಂತೆ ಮಾಡಬೇಕಿದೆ. ಉದ್ದಿಮೆದಾರರು, ಚಹಾ
ಮಾರುವವನು ತಮ್ಮ ಸಾಮಗ್ರಿಗಳಿಗೆ ಬೆಲೆ ನಿರ್ಧರಿಸುತ್ತಾರೆ. ಆದರೆ, ರೈತ ತಾನು ಬೆಳೆದ ಬೆಳೆಗೆ ಬೆಲೆ ನಿರ್ಧರಿಸದೆ ಅಲೆಮಾರಿಯಂತೆ ಅಲೆಯುತ್ತಾನೆ. ಅವರು ಬೆಲೆ ನಿರ್ಧಾರಕರಾದಾಗ ಮಾತ್ರ ರೈತರ ಪ್ರಗತಿ ಸಾಧ್ಯವಿದೆ ಎಂದು ವಿಶ್ಲೇಷಿಸಿದರು. ಕಳೆದ ವರ್ಷ ನಮ್ಮ ಆಯೋಗದ ಶಿಫಾರಸಿನಿಂದ ತೊಗರಿಗೆ 5,500 ರೂ. ಬೆಂಬಲ ಬೆಲೆ ನೀಡಲಾಯಿತು. ಕೊಬ್ಬರಿಗೆ ಒಂದು
ಸಾವಿರ ರೂ. ಬೆಂಬಲ ಬೆಲೆ ನೀಡಲಾಗಿದೆ. ಎಪಿಎಂಸಿಗಳು ರೈತರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದರು.
ಕೃಷಿ ವಿವಿ ಕುಲಪತಿ ಡಾ| ಪಿ.ಎಂ.ಸಾಲಿಮಠ, ಕುಲಸಚಿವ ಡಾ| ಡಿ.ಎಂ.ಚಂಡರಗಿ, ಡಾ| ಎಂ.ಜಿ.ಪಾಟೀಲ, ಡಾ| ಎ.ಎಸ್.
ಹಳಿಪ್ಯಾಟ್, ಕೃಷಿ ಕಾಲೇಜಿನ ಮುಖ್ಯಸ್ಥ ಡಾ| ಜಾಗೃತಿ ಬಿ. ದೇಶಮಾನ್ಯ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.