Advertisement

“ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು’

01:00 AM Feb 04, 2019 | Team Udayavani |

ಉಡುಪಿ: ಸರಕಾರದ ಗೊಂದಲಕಾರಿ ಧೋರಣೆಗಳಿಂದ ರೈತರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಹವಾಮಾನ ಬದಲಾವಣೆಗಳು ಅವರನ್ನು ಆತಂಕದಲ್ಲಿ ಸಿಲುಕಿಸುತ್ತಿವೆ. ಈ ನಿಟ್ಟಿನಲ್ಲಿ ಸಂಶೋಧಕರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬ್ರಹ್ಮಾವರದ ಕೃಷಿ ಕೇಂದ್ರವೂ ಹಲವು ರೀತಿಯ ತಂತ್ರಜ್ಞಾನ ಗಳನ್ನು ಆವಿಷ್ಕರಿಸಿದೆ ಎಂದು ಶಿವಮೊಗ್ಗದ ತೋಟಗಾರಿಕಾ ವಿ.ವಿ. ಸಂಶೋಧನ ವಿಜ್ಞಾನಿ ಪಿ.ಎಚ್‌. ಗೌಡ ಹೇಳಿದರು.
ಜಿÇÉಾ ಕೃಷಿಕ ಸಂಘದ ವತಿಯಿಂದ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ರವಿವಾರ ನಡೆದ “ರೈತ ಸಮಾವೇಶ-2019′ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮಳೆ, ನೀರಿನ ಪ್ರಮಾಣ ಕಡಿಮೆ ಯಾಗುತ್ತಿದ್ದು, ಈ ನಿಟ್ಟಿನಲ್ಲಿ ರೈತರು ಪರ್ಯಾಯ ಬೆಳೆಯತ್ತ ಯೋಚಿಸಬೇಕು. ಇಲ್ಲಿನ ಪ್ರಮುಖ ಬೆಳೆಯಾದ ಗೋಡಂಬಿ ಇಳುವರಿಗೆ ವಿಭಿನ್ನ ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗುವುದು. ಕೃಷಿಕರು ಒಗ್ಗಟ್ಟಿನ ಮನೋಭಾವದೊಂದಿಗೆ ಸರಕಾರದ ಯೋಜನೆಗಳು ನೇರವಾಗಿ ರೈತರಿಗೆ ಸಿಗುವಂತಾಗಲು ಶ್ರಮಿಸಬೇಕು ಎಂದರು. 

ಕೃಷಿಕರಾದ  ನಾರಾಯಣದಾಸ ಉಡುಪ ಬೈಲೂರು, ಜಯಲಕ್ಷ್ಮೀ ಆಚಾರ್ಯ ಬೈಲೂರು, ಜೆರೋಮ್‌ ಕಸ್ತಲಿನೊ ಪಾಂಬೂರು, ದಯಾನಂದ ಸುವರ್ಣ ಮಣಿಪುರ, ಪ್ರಕಾಶ್‌ ಶೆಟ್ಟಿ ಪೆರ್ಡೂರು, ದಯಾನಂದ ಗಾಣಿಗ ಹಿರಿಯಡ್ಕ ಅವರನ್ನು ಸಮ್ಮಾನಿಸಲಾಯಿತು.

ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿ, ಕೃಷಿಕರ ಸೇವೆಯ ನಿರಂತರ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಮಂದಿ ಕೃಷಿಕರನ್ನು ಒಗ್ಗೂಡಿಸುವ ಕಾರ್ಯವಾಗಬೇಕು. ಕೃಷಿ ಲಾಭದಾಯಕ ಆಗದಿದ್ದರೆ ನಮ್ಮ ಭೂಮಿ ನಮ್ಮಲ್ಲಿರುವುದಿಲ್ಲ ಎಂದರು.

ಕೃಷಿ ಮಾಹಿತಿ ಸಿಗಲಿ
ಜಿಲ್ಲಾ ಸಂಘದ ಮೂಲಕ ಪ್ರತಿಯೊಬ್ಬ ರೈತರೂ ಕೃಷಿ ಸೇವೆಯನ್ನು ಪಡೆದುಕೊಳ್ಳಬೇಕು. ವೈಜ್ಞಾನಿಕ ಕೃಷಿ ಪದ್ಧತಿಯತ್ತ ರೈತರು ಮುಖಮಾಡಬೇಕೆಂದರು. 

Advertisement

ಪತ್ರಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣಗೈದರು. ಪ್ರ.ಕಾರ್ಯದರ್ಶಿ ಶ್ರೀನಿವಾಸ ಭಟ್‌ ಕುದಿ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ 128 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರ ಮನೆ ಬಾಗಿಲಿಗೆ ಹೋಗಿ ಕೃಷಿ ಮಾಹಿತಿ ನೀಡುವ ಕಾರ್ಯವಾಗಬೇಕು ಎಂದು ಅವರು ತಿಳಿಸಿದರು.

ರೋಟರಿ ಜಿಲ್ಲಾಧ್ಯಕ್ಷ ಮಂಜುನಾಥ ಉಪಾಧ್ಯ, ವಿಜಯ ಬ್ಯಾಂಕ್‌ ಪ್ರಾದೇಶಿಕ ಪ್ರಬಂಧಕ ಕೆ.ಆರ್‌. ರವಿಚಂದ್ರನ್‌, ಉಪಾಧ್ಯಕ್ಷ ದಿನೇಶ್‌ ಶೆಟ್ಟಿ ಹೆರ್ಗ, ಕೋಶಾಧಿಕಾರಿ ಪಾಂಡುರಂಗ ನಾಯಕ್‌, ರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್‌ ಸ್ವಾಗತಿಸಿ, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು  ಪ್ರಸ್ತಾವನೆಗೈದರು. 
ಕಾರ್ಯಕ್ರಮದ ಬಳಿಕ ಕೃಷಿ ಮಾಹಿತಿ ಶಿಬಿರ ನಡೆಯಿತು. 

ಆಧುನಿಕ ತಂತ್ರಜ್ಞಾನ ಬಳಸಿ
ಕಾರ್ಮಿಕರ ಕೊರತೆಯಿಂದಾಗಿ ಭತ್ತ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಕೃಷಿ ಮಾಡುವತ್ತ ಆಸಕ್ತಿ ತೋರಿಸಬೇಕು. ಕೃಷಿ ಕೇಂದ್ರದ ಮೂಲಕ ಬಾಡಿಗೆ ಯಂತ್ರೋಪಕರಣಗಳನ್ನು ಪಡೆದು ಕೃಷಿ ಮಾಡಬೇಕು. ಸೇವಾ ಕೇಂದ್ರಗಳನ್ನು ಸಮರ್ಪಕ ರೀತಿಯಲ್ಲಿ ಬಳಸಬೇಕು. ಭತ್ತದ ಬೆಳೆ ಉಳಿಸುವ ಕೆಲಸವಾಗಬೇಕು. 
-ಪಿ.ಎಚ್‌. ಗೌಡ

ಕೃಷಿ ಪ್ರದರ್ಶನ
ವಿವಿಧ ರೀತಿಯ ತರಕಾರಿ ಬೀಜಗಳು, ತೆಂಗಿನಕಾಯಿಯ ಚಾಕಲೆಟ್‌, ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ವಿವಿಧ ತೋಟಗಾರಿಕಾ ಬೆಳೆಗಳು, ಕೀಟನಾಶಕ, ನೈಸರ್ಗಿಕ ಉತ್ಪನ್ನಗಳ ಸೋಪುಗಳೂ ಕೂಡ ಗಮನ ಸೆಳೆದವು. 

Advertisement

Udayavani is now on Telegram. Click here to join our channel and stay updated with the latest news.

Next