Advertisement

ಕ್ವಿಂಟಲ್‌ ಕೊಬ್ಬರಿಗೆ 15 ಸಾವಿರ ದರ ನಿಗದಿಗೆ ಒತ್ತಾಯ

02:58 PM Mar 04, 2023 | Team Udayavani |

ಚನ್ನರಾಯಪಟ್ಟಣ: ರೈತರು ಬದುಕು ಹಸನಾಗಬೇಕಾದರೆ ಪ್ರತಿ ಕ್ವಿಂಟಲ್‌ ಕೊಬ್ಬರಿಗೆ 15 ಸಾವಿರ ದರ ನಿಗದಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಶಾಸಕ ಸಿ. ಎನ್‌ .ಬಾಲಕೃಷ್ಣ ಒತ್ತಾಯಿಸಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಜ್ಯ ಮಾರಾಟ ಮಹಾಮಂಡಳಿಯಿಂದ ಕೊಬ್ಬರಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಪ್ರತಿ ಕ್ವಿಂಟಲ್‌ಗೆ 11750 ರೂ.ದರ ನಿಗದಿ ಮಾಡಿದೆ. ಇದರಿಂದ ರೈತರು ಲಾಭ ನೋಡಲು ಸಾಧ್ಯವಾಗುತ್ತಿಲ್ಲ. ನಷ್ಟವನ್ನು ತಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಬೆಂಬಲ ಬೆಲೆ ಜಾರಿಗೆ ಆಗ್ರಹ: ತಾಲೂಕಿನಲ್ಲಿ ಈವರೆಗೆ 2557 ರೈತರಿಂದ 32811 ಕ್ವಿಂಟಲ್‌ ನೋಂದಣಿ ಹೊಂದಿದೆ. ಮಾ.13 ನೋಂ ದಣಿ ಪ್ರಕ್ರಿಯೆ ಮುಗಿಯಲಿದೆ. ಅಷ್ಟರಲ್ಲಿ ರೈತರು ನೋಂದಾಯಿ ಸಿ ಕೊಳ್ಳಿ. ಇನ್ನು ಜು.26ರ ಒಳಗೆ ಖರೀದಿ ಪ್ರಕ್ರಿ ಯೆ ಮುಕ್ತಾಯ ಮಾಡಲು ಸರ್ಕಾರ ದಿನಾಂಕ ನಿಗದಿ ಮಾಡಿದೆ. ಅಷ್ಟರಲ್ಲಿ ರೈತರು ಕೊಬ್ಬರಿ ಮಾರಾಟ ಮಾಡು ವುದು ಒಳಿತು ಎಂದರು.

ರೈತರ ಬಗ್ಗೆ ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ತಿಪಟೂರು ಶಾಸಕ ನಾಗೇಶ್‌ ಅಲ್ಲಿನ ಕಾರ್ಯ ಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದಾಗ ಕೊಬ್ಬರಿಗೆ 600 ರೂ.ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದರು. ಇದು ಜಾರಿಯಾಗಬೇಕಿದೆ. ತೆಂಗು ಬೆಳೆಗಾರರು ಸಾಕಷ್ಟು ತೊಂದರೆಯಲ್ಲಿದ್ದಾರೆ ಎಂದರು.

ಎರಡು ಲಕ್ಷ ಕ್ವಿಂಟಲ್‌ ರಾಗಿ ಖರೀದಿ: 18250 ಮಂದಿ ರೈತರು ರಾಗಿ ನೋಂದಣೆ ಮಾಡಿದ್ದು, 8436 ರೈತರಿಂದ ಎರಡು ಲಕ್ಷ ಕ್ವಿಂಟಲ್‌ ರಾಗಿ ಖರೀದಿ ಮಾಡಲಾಗಿದೆ. ನುಗ್ಗೇಹಳ್ಳಿ, ಶ್ರಣಬೆಳಗೊಳ ಹೋಬಳಿ ಕೇಂದ್ರದಲ್ಲಿ ರಾಗಿ ಖರೀದಿ ಉತ್ತಮ ರೀತಿ ನಡೆಯುತ್ತಿದೆ. ಪಟ್ಟಣದಲ್ಲಿ ಮಾತ್ರ ರಾಗಿ ಖರೀ ದಿ ಮಾಡಿದ್ದರೆ ಸಾಕಷ್ಟು ತೊಂದರೆ ಆಗುತಿತ್ತು ಎಂದು ಹೇಳಿದರು.

Advertisement

ತೆಂಗು ಬೆಳೆ ರಕ್ಷಣೆಗೆ ಸಲಹೆ: ತೆಂಗು ರೋಗಕ್ಕೆ ಒಳಗಾಗುತ್ತಿದೆ ತೆಂಗು ಸಂರಕ್ಷಣೆ ಮಾಡುತ್ತಿಲ್ಲ. ಐದು ಹಲ್ಲಿನ ನೇಗಿಲಿನಿಂದ ಉಳುಮೆ ಬೇಡ. ಭೂಮಿ ತಾಯಿಗೆ ಸೇವೆ ಮಾಡಿ ನಮ್ಮ ಬದುಕು ಬಂಗಾರ ಆಗಲಿದೆ. ನಿತ್ಯ ತೋಟಕ್ಕೆ ತೆರಳಿ ವೀಕ್ಷಣೆ ಮಾ ಡಿ, ತೆಂಗಿನ ಮರಗಳ ಹಾರೈಕೆಗೆ ರೈತರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಅವಕಾಶ ಬಳಸಿಕೊಂಡಿಲ್ಲ: ಕ್ಷೇತ್ರದಲ್ಲಿ ರೈಲು ಹೊದ ಮೇಲೆ ಟಿಕೆಟ್‌ ಪಡೆದಿದ್ದಾರೆ, ತಮಗೆ ಸಿಕ್ಕ ಅವಕಾಶ ಸರಿಯಾಗಿ ಬಳಕೆ ಮಾ ಡಿಕೊಂಡಿಲ್ಲ. ಈಗ ನಮ್ಮ ಮೇಲೆ ಇಲ್ಲಸಲ್ಲದ ದೂರು ಹೇಳುತ್ತಿದ್ದಾರೆ. ಇದಕ್ಕೆ ಸಕಾಲದಲ್ಲಿ ಉತ್ತರ ನೀಡುತ್ತೇನೆ ಎಂದು ಮಾಜಿ ಶಾಸಕ ಸಿ.ಎಸ್‌ .ಪುಟ್ಟೇಗೌಡರ ಹೆಸರು ಹೇಳದೆ ಕಿಡಿಕಾರಿದರು.

ರಾಜ್ಯ ಸಹಕಾರ ಮಾರಾಟ ಮಂಡಳಿ ನಿರ್ದೇಶಕ ಪುಟ್ಟಸ್ವಾಮಿಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಿವಣ್ಣ ಮಂಜುನಾಥ, ಕಾರ್ಯದರ್ಶಿ ಮೋಹನ್‌, ಟಿಎಪಿಎಂಎಸ್‌ ಅಧ್ಯಕ್ಷ ರಮೇಶ್‌, ನಿರ್ದೇಶಕರಾದ ನಂಜಪ್ಪ, ಮನು, ಪಿಕಾರ್ಡ್‌ ಮಾಜಿ ನಿರ್ದೇಶಕ ನಂಜುಡೇಗೌಡ, ಮುಖಂಡರಾದ ನಾಗೇಶ್‌, ಮಜಂಣ್ಣ ಮೊದಲಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next