Advertisement
ಶ್ರೀ ಜಯದೇವ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಮುಂದೆ ವಿವಿಧ ಬ್ಯಾಂಕ್‌ಗಳ ನೋಟಿಸ್ ಸುಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನೀತಿ ಸಂಹಿತೆ ಅವಧಿ ಮುಕ್ತಾಯ ಆಗುವ ತನಕ ಸಹ ಕಾಯುವಂತಹ ಸೌಜನ್ಯವನ್ನೂ ತೋರದ ಕೆಲ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ಜಾರಿ ಮಾಡಿರುವುದು ಅತ್ಯಂತ ಖಂಡನೀಯ ಮತ್ತ ರೈತ ವಿರೋಧಿ ಕ್ರಮ ಎಂದು ರೈತರು ದೂರಿದರು. ಸತತ ಬರಗಾಲ, ಮಳೆಯ ಕೊರತೆಯಿಂದ ಮುಂಗಾರು, ಹಿಂಗಾರು ಬೆಳೆ ಇಲ್ಲದೆ ರೈತರು ಜೀವನ ನಡೆಸುವುದು ದುಸ್ತರವಾಗಿದೆ. ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆ ಜಾರಿಗೆ ತರುತ್ತಿದೆ. ಆದರೂ, ಕೆಲವಾರು ಬ್ಯಾಂಕ್‌ಗಳು ನೋಟಿಸ್ ಜಾರಿ ಮಾಡುವ ರೈತರಿಗೆ ಮಾನಸಿಕಿ ಕಿರುಕುಳ, ದೌರ್ಜನ್ಯವೆಸಗುತ್ತಿದ್ದಾರೆ. ಅಂತಹ
ಬ್ಯಾಂಕ್‌ಗಳ ವಿರುದ್ಧ ಸಂಬಂಧಿತರು ತೀವ್ರ ಸ್ವರೂಪದ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘಟನೆಯಿಂದ ರಾಜ್ಯಾದ್ಯಂತ
ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Related Articles
Advertisement
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಅನೇಕ ಭಾಗದಲ್ಲಿ ಸಮಸ್ಯೆ ಬಗೆಹರಿಯುತ್ತಿಲ್ಲ. ಕೂಡಲೇ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯ ಒದಗಿಸುವತ್ತ ಗಮನ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್. ಅರಸನಾಳ್ ಸಿದ್ದಪ್ಪ. ಗುಮ್ಮನೂರು ಬಸವರಾಜ್, ಆಲೂರು ಪರಶುರಾಮ್, ಕೋಲ್ಕುಂಟೆ ಬಸಣ್ಣ, ಕಾಡಜ್ಜಿ ಪ್ರಕಾಶ್, ಚಿರಂಜೀವಿ, ಬೂದಾಳ್ ಭಗತ್‌ಸಿಂಹ, ಗುಮ್ಮನೂರು ಕೃಷ್ಣಮೂರ್ತಿ, ಯಲ್ಲೋದಹಳ್ಳಿ ರವಿ, ಲೋಕೇಶ್, ಉಚ್ಚಂಗೆಪ್ಪ, ಪುಟ್ಟಪ್ಪ, ಪರಶುರಾಮ್ ಇತರರು ಇದ್ದರು.