1. ಹಾಲಿ - ಮಾಜಿ ಪ್ರಧಾನಿಗಳ ಭೇಟಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, “ ಇಂದು ಸಂಸತ್ತಿನಲ್ಲಿ ನಮ್ಮ ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಜೊತೆ ಉತ್ತಮ ಸಭೆ ನಡೆಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
2. ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ
ವಿಶ್ವದೆಲ್ಲೆಡೆ ಈಗ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಸದ್ದು ಮಾಡುತ್ತಿದೆ. ಸಾಕಷ್ಟು ಜನರಿಗೆ, ವೈರಸ್ ಸೋಂಕು ತಗಲುವ ಆತಂಕಕ್ಕಿಂತ ಲಾಕ್ ಡೌನ್ ಭಯವೇ ಹೆಚ್ಚಾಗಿದೆ. ನಾವು ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
3. ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ?
ಭಾರತದಲ್ಲಿ ಈವರೆಗೆ ಕೋವಿಡ್ ನ ಹೊಸ ರೂಪಾಂತರಿ ಒಮಿಕ್ರಾನ್ ವೈರಸ್ ಪ್ರಭೇದ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯಾ ಹೇಳಿದ್ದಾರೆ. ಮಂಗಳವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದರು.
4. ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್ ವಕ್ತಾರ!
ಅಹ್ಮದ್ ವಲಿ ಹಕ್ಮಲ್ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಹಣಕಾಸು ಇಲಾಖೆಯ ವಕ್ತಾರನಾದ್ದಾನೆ. ಕೆಲವು ವರ್ಷಗಳ ಹಿಂದೆ ಈತ ಭಾರತದಲ್ಲಿ ಪದವಿ ವ್ಯಾಸಂಗ ಮಾಡಿದ್ದ ಎಂಬ ಕುತೂಹಲದ ವಿಚಾರ ಈಗ ಬಯಲಾಗಿದೆ. ಈ ಮಾಹಿತಿಯನ್ನು ಅಮೆರಿಕದ “ವಾಲ್‌ಸ್ಟ್ರೀಟ್ ಜರ್ನಲ್’ ಪ್ರಕಟಿಸಿದೆ.
5. ಮೂಗರಿಗೆ ಧ್ವನಿಯಾಗಲಿದೆ ಈ ಗ್ಲೌಸ್‌ಗಳು!
ಜೋಧಪುರದ ಐಐಟಿ ಸಂಶೋಧಕರು ವಿಶಿಷ್ಟ ಸಾಧನವೊಂದನ್ನು ಸಿದ್ಧಪಡಿಸಿದ್ದಾರೆ. ಇದು ಮೂಗರಿಗೆ ನೆರವಾಗುತ್ತದೆ. ಇದನ್ನು ಬಳಸುವ ಮೂಗರ ಕೈಸನ್ನೆಗಳು ಧ್ವನಿಯಾಗಿ ಬದಲಾಗುತ್ತವೆ! ಇದರ ಬೆಲೆ 5000 ರೂ.ಗಳಿಗಿಂತಲೂ ಕಡಿಮೆ ಇದೆ ಎನ್ನಲಾಗಿದೆ.
6. ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು ತಿರುಗೇಟು
ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಅಶಿಸ್ತು ತೋರಿಸಿದ್ದ 12 ಮಂದಿ ರಾಜ್ಯಸಭಾ ಸದಸ್ಯರನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿತ್ತು. ಇದನ್ನು ವಿರೋದ ಪಕ್ಷ ತೀವ್ರವಾಗಿ ವಿರೋಧಿಸಿದ್ದವು. ನನಗೆ ಪಾಠ ಹೇಳೋದು ಬೇಡ. ಈ ಆದೇಶವನ್ನು ಹಿಂಪಡೆಯಲ್ಲ ಎಂದು ಸಭಾಧ್ಯಕ್ಷರು ಇದಕ್ಕೆ ತಿರುಗೇಟು ನೀಡಿದ್ದಾರೆ.
7. ರಾಜ್ ಮೌಳಿಯ RRR ಚಿತ್ರದಲ್ಲಿ ಕನ್ನಡದ ಈ ನಟ ಇದ್ದಾರಂತೆ?
ರಾಜ್ ಮೌಳಿ ಆಕ್ಷನ್ ಕಟ್ ಹೇಳಿರುವ ಆರ್ ಆರ್ ಆರ್ ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕನ್ನಡ ನಟರೂ ಸೇರಿದಂತೆ ಹಲವು ಭಾಷೆಯ ನಟ-ನಟಿಯರು ಬಣ್ಣ ಹಚ್ಚಿದ್ದಾರೆ.
8. ಐಪಿಎಲ್ ನಿಂದ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ಬ್ಯಾನ್?
ಎರಡು ಹೊಸ ತಂಡಗಳೊಂದಿಗೆ 2022ರ ಸೀಸನ್ ನ ಐಪಿಎಲ್ ಗೆ ತಯಾರಿ ನಡೆಯುತ್ತಿದೆ. ಆದರೆ ಈ ಮಧ್ಯೆ ಸ್ಟಾರ್ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ರಶೀದ್ ಖಾನ್ ರನ್ನು ಐಪಿಎಲ್ ನಿಂದ ಒಂದು ವರ್ಷ ನಿಷೇಧ ಮಾಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.