ಶ್ರೀರಂಗಪಟ್ಟಣ: ತಮಿಳು ನಾಡಿಗೆ ಕಾವೇರಿ ಪ್ರಾಧಿಕಾರದ ಮಾತು ಕೇಳಿ ನೀರು ಬಿಟ್ಟ ರಾಜ್ಯ ಸರಕಾರದ ವಿರುದ್ಧ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಸ್ನಾನಘಟ್ಟದ ಬಳಿ ನೀರಿಗಿಳಿದು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.
ಕೂಡಲೆ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಹೀಗೆ ಮುಂದುವರೆದರೆ ಜಿಲ್ಲೆಯಾದ್ಯಂತ ಉಗ್ರ ಚಳುವಳಿ ನಡೆಸಬೇಕಾಗುತ್ತದೆ. ಜಲಾಶಯದಲ್ಲಿ ಇರುವ ನೀರು ಬರಿದು ಮಾಡುವ ಸರ್ಕಾರ ಇಲ್ಲಿ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದೆ.
ರೈತರ ಬೆಳೆಗೆ ನೀರಿಲ್ಲ ಎಂದು ರೈತರು ಪರಿತಪಿಸುತ್ತಿದ್ದರೂ ಕಟ್ಡು ನೀರು ನೀಡುತ್ತೇವೆ ಇಲ್ಲಿನ ರೈತರಿಗೆ ಎಂದು ಹೇಳಿದೆ
ಆದರೆ ಕಟ್ಟು ನೀರಿಗೂ ಬರ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅರ ಬೆತ್ತಲೆ ಪ್ರತಿಭಟನೆ ನಡೆಸಿದ ಹೋರಾಟ ಸಮಿತಿ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಇದನ್ನೂ ಓದಿ: Mangaluru: ತಮಿಳುನಾಡಿಗೆ ನೀರು… ರಾಜ್ಯ ಸರಕಾರದಿಂದ ರೈತರಿಗೆ ಅನ್ಯಾಯ: ಕಟೀಲ್ ಆರೋಪ