ಬೆಳಗಾವಿ: ಬೆಳಗಾವಿ ನಗರ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ನಿರ್ಮಾಣವಾಗಲಿರುವ ರಿಂಗ್ ರೋಡ್ ವಿರೋಧಿಸಿ ರೈತರು ಸೋಮವಾರ ಬಾರುಕೋಲು ಚಳುವಳಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Advertisement
ನಗರದ ಧರ್ಮವೀರ ಸಂಭಾಜಿ ವಿರುದ್ಧ ದಿಂದ ಆರಂಭವಾದ ಪ್ರತಿಭಟನೆ ರ್ಯಾಲಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ರಿಂಗ್ ರೋಡ್ ನಿರ್ಮಿಸದಂತೆ ಆಗ್ರಹಿಸಿದರು.
ಧರ್ಮವೀರ ಸಂಭಾಜಿ ವೃತ್ತದಿಂದ ಕಾಲೇಜು ರಸ್ತೆ ಚೆನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ರಿಂಗ್ ರೋಡ್, ಹಲಗಾ-ಮಚ್ಛೆ ಬೈಪಾಸ್, ಹೊಸ ರೈಲ್ವೆ ಹಳಿ ನಿರ್ಮಾಣ ಮಾಡದಂತೆ ಒತ್ತಾಯಿಸಿದರು.