Advertisement

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರ ಪ್ರತಿಭಟನೆ

03:15 PM Jun 30, 2020 | Suhan S |

ರಾಣಿಬೆನ್ನೂರ: ಭೂಸುಧಾರಣೆ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ರಾಜ್ಯ ಪ್ರದೇಶ ರೈತ ಹಾಗೂ ರೈತ ಕಾರ್ಮಿಕ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪತಹಶೀಲ್ದಾರ್‌ ಗೆ ಸಲ್ಲಿಸಿದರು.

Advertisement

ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ಕೃಷಿ ಭೂಮಿ ನಾಶವಾದಲ್ಲಿ ದೇಶದಲ್ಲಿ ಆಹಾರ ಸಮಸ್ಯೆ ಉದ್ಭವವಾಗಲಿದೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಆಗುವ ಅನಾಹುತಗಳಿಗೆ ನೇರವಾಗಿ ರೈತರೇ ಬಲಿ ಪಶುಗಳಾಗುತ್ತಾರೆ. ಮಧ್ಯಮ ಮತ್ತು ಸಣ್ಣ ರೈತರಿಗೆ ವ್ಯವಸಾಯ ಮಾಡಲು ಜಮೀನುಗಳಿಲ್ಲದೆ ಬಡವರಾಗುತ್ತಾರೆ. ಬಂಡವಾಳ ಶಾಹಿಗಳು ಕೃಷಿ ಭೂಮಿಯನ್ನು ಖರೀದಿಸುವ ಮೂಲಕ ಕೃಷಿ ಚಟುವಟಿಯಲ್ಲಿದ್ದ ರೈತರು ವಿಮುಖರಾದಲ್ಲಿ ದೇಶದಲ್ಲಿ ಆಹಾರ ಕೊರತೆಯಾಗಲಿದೆ ಎಂದರು.

ರಾಜ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ ಮಾತನಾಡಿದರು. ಹಿರಿಯ ರೈತ ಮುಖಂಡ ದಯಲಾಲ್‌ ಸಂಘವಿ, ಕೃಷ್ಣಪ್ಪ ಚವ್ಹಾಣ, ಚಂದ್ರಪ್ಪ ಕಾಳಪ್ಪನವರ, ಪ್ರಶಾಂತ್‌ ಬಿಸವಳ್ಳಿ, ಶಶಿಕಲಾ ಹದ್ಯರಹಳ್ಳಿ,ಲೀಲಾವತಿ ಹೊಸಹಳ್ಳಿ, ದೇವರಾಜ ಚವ್ಹಾಣ, ಶಿವಾನಂದ ಹೊಸಮನಿ,  ರಮೇಶ ಹಿರೇತನದೇವರ, ಎಚ್‌ .ಟಿ.ಅರಳಿಕಟ್ಟಿ, ವಿರುಪಾಕ್ಷಪ್ಪ ಮೇಡ್ಲೆàರಿ, ಜೆ.ಎಸ್‌.ನಾಗವತ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next