ಕನಕಪುರ: ರೈತ ಕುಲಕ್ಕೆ ಮಾರಕವಾದ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಂ.ರಾಮು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹೊಂಗಣಿ ದೊಡ್ಡಿ ಗ್ರಾಮದಲ್ಲಿ ನಮ್ಮಭೂಮಿ ನಮ್ಮ ಹಕ್ಕು ಎಂಬ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಸರ್ಕಾರ ಇಡೀ ರೈತ ಕುಲವೇ ವಿರೋಧವ್ಯಕ್ತಪಡಿಸುತ್ತಿರುವ ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ತಂದು ರೈತರನ್ನು ನಾಶಮಾಡಲು ಹೊರಟಿದ್ದು, ನಮ್ಮ ಹೋರಾಟನಿರಂತರವಾಗಿರಬೇಕಾದರೆ, ಪ್ರತಿ ಹಳ್ಳಿಯಲ್ಲಿ ತಿದ್ದುಪಡಿ ವಿರೋಧಿಸಿ ನಾಮಫಲಕ ಹಾಕಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು.ಈಕಾಯ್ದೆ ವಿಧಾನಪರಿಷತ್ತಿನಲ್ಲಿ ಅಂಗೀಕಾರವಾಗದೆಉಳಿದಿದೆ. ಹಾಗಾಗಿ ಸರ್ಕಾರ ಮತ್ತೆ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಅನುಷ್ಠಾನಕ್ಕೆತರಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಳುವವನೇ ಭೂ ಒಡೆಯ ಎಂಬ ಕಾಯ್ದೆ ಜಾರಿಗೊಳಿಸಿದ್ದರು. ಆದರೆ ಕೆಲವು ಮಾಲೀಕರು ರಾಜಕೀಯ ಪ್ರಭಾವದಿಂದ ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಭೂಮಿಯ ಹಕ್ಕು ನೀಡಿದೆ, ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಂತಹ ಭೂ ಮಾಲೀಕರ ವಿರುದ್ಧ ರಾಜ್ಯಮಟ್ಟದ ಹೋರಾಟ ನಡೆಸಿ,ಉಳುಮೆ ಮಾಡುತ್ತಿರುವ ರೈತರಿಗೆ ಭೂಮಿ ದೊರಕಿಸಿಕೊಡುವುದು ಸಂಘದ ಕರ್ತವ್ಯ. ಹಾಗಾಗಿ ರೈತ ಸಂಘದ ರಾಜ್ಯ ಸಮಿತಿ ಸಭೆ ಕರೆದು ನಿಮ್ಮ ಗ್ರಾಮದಲ್ಲೇ ಹೋರಾಟದರೂಪುರೇಷೆದ ಬಗ್ಗೆ ಚೆರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚನ್ನಪಟ್ಟಣ ತಾಲೂಕು ಮಾಜಿ ಅಧ್ಯಕ್ಷ ಕೃಷ್ಣಪ್ಪ ರಾಜು, ಜಿಲ್ಲಾ ಗೌರವಾಧ್ಯಕ್ಷ ತಿಮ್ಮೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್, ಹಿರಿಯ ರೈತ ಮುಖಂಡ ಸಿದ್ದೇಗೌಡ, ತಾಲೂಕು ಅಧ್ಯಕ್ಷ ಶಶಿಕುಮಾರ್, ಉಪಾಧ್ಯಕ್ಷ ಸಿದ್ದರಾಮೇಗೌಡ, ಕಾರ್ಯದರ್ಶಿ ಬಸವರಾಜು, ಯುವ ರೈತ ಘಟಕದ ತಾಲೂಕು ಅಧ್ಯಕ್ಷ ರವಿ,ಕಾರ್ಯದರ್ಶಿ ಹರೀಶ್, ಹೋಬಳಿಅಧ್ಯಕ್ಷ ಕುಮಾರ್, ಪ್ರಧಾನಕಾರ್ಯದರ್ಶಿಅಭಿಷೇಕ್,ಗ್ರಾಮಸ್ಥ ಮಲ್ಲೇಶ್, ರವಿ, ಮುನಿ ಸಿದ್ದೇಗೌಡ, ಕರಿಸಿದ್ದೇಗೌಡ, ಚಿಕ್ಕಣ್ಣ, ಮಹಾದೇವ, ಶಿವ ಮಾದೇಗೌಡ ಮುಂತಾದವರು ಉಪಸ್ಥಿತರಿದ್ದರು
ಪ್ರಸ್ತುತ ಆಡಳಿತ ಹಾಗೂ ವಿರೋಧ ಪಕ್ಷಗಳು ದೇಶದ ಕೃಷಿಯನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದು, ರೈತರು ಜಾಗೃತರಾಗಬೇಕು.
-ಚೀಲೂರು ಮುನಿರಾಜು, ಜಿಲ್ಲಾ ಕಾರ್ಯಾಧ್ಯಕ್ಷ