Advertisement

ಅಗ್ನಿಪಥ ಯೋಜನೆ ವಿರೋಧಿಸಿ ರೈತರ ಪ್ರತಿಭಟನೆ

11:45 AM Jun 25, 2022 | Team Udayavani |

ಕಲಬುರಗಿ: ದೇಶದಲ್ಲಿ ಜಾರಿಗೆ ತರುತ್ತಿರುವ ಅಗ್ನಿಪಥ ಯೋಜನೆ ರೈತ ವಿರೋಧಿಯಾಗಿದೆ. ಇದು ರೈತರ ವಿರುದ್ಧ ಕೇಂದ್ರ ಸರಕಾರದ ಸೇಡಿನ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಂಯುಕ್ತ ಹೋರಾಟ ಕರ್ನಾಟಕ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

Advertisement

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ದೇಶದ ಯೋಧರು ಎಂದರೆ ಸಮವಸ್ತ್ರ ಧರಿಸಿದ ರೈತರು ಇದ್ದಂತೆ. ಬಹುತೇಕ ಸೈನಿಕರು ರೈತಾಪಿ ಕುಟುಂಬದಿಂದ ಬಂದವರು. ಸೈನ್ಯದ ಉದ್ಯೋಗ ಎಂಬುದು ಲಕ್ಷಾಂತರ ರೈತ ಕುಟುಂಬಗಳ ಹೆಮ್ಮೆ ಹಾಗೂ ಆರ್ಥಿಕ ಭದ್ರತೆಯ ಆಧಾರದ ಧ್ಯೋತಕವಾಗಿದೆ. ಆದ್ದರಿಂದ ಅಗ್ನಿಪಥ ಯೋಜನೆ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಘೋಷಣೆ ಮಾಡಿದರು.

ಯೋಜನೆಯ ಅಖೀಲ ಭಾರತ ಎಲ್ಲ ಶ್ರೇಣಿ ನಿಯಮದ ಅಡಿಯ ನೇಮಕಾತಿಯಲ್ಲಿ ರೈತ ಚಳವಳಿ ತುಂಬಾ ಕ್ರಿಯಾಶೀಲವಾಗಿರುವ ಪ್ರದೇಶಗಳ ನೇಮಕಾತಿ ಪ್ರಮಾಣವನ್ನು ಬಹಳ ದೊಡ್ಡ ರೀತಿಯಲ್ಲಿ ಕಡಿತ ಮಾಡಿರುವುದು ಆಕಸ್ಮಿಕವಾಗಿ ಆಗಿರುವಂತದ್ದಲ್ಲ. ರೈತ ಚಳವಳಿ ಕಾರಣದಿಂದ ಸೋತು ಕಂಗಾಲಾಗಿದ್ದ ಸರ್ಕಾರ ರೈತರ ಮೇಲೆ ಸೇಡು ತೀರಿಸಿಕೊಳ್ಳಲು ಆಡುತ್ತಿರುವ ಮತ್ತೊಂದು ದುರುದ್ದೇಶದ ಆಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಖೀಲ ಭಾರತ ಕಿಸಾನ್‌ ಮಹಾಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ, ಆರ್‌ ಕೆಎಸ್‌ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ., ಕರ್ನಾಟಕ ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ತಾಂಬೆ, ಭೀಮಾಶಂಕರ್‌ ಮಾಡ್ಯಾಳ್‌, ಉಮಾಪತಿ ಮಾಲಿ ಪಾಟೀಲ, ಮಲ್ಲಣಗೌಡ, ಎಸ್‌. ಆರ್‌. ಕೊಲ್ಲೂರ್‌, ಎ.ಬಿ. ಹೊಸಮನಿ, ಅರ್ಜುನ್‌ ಗೊಬ್ಬೂರ್‌, ಭೀಮರಾಯ್‌ ಮುದಬಸಪ್ಪಗೋಳ್‌, ಫರಖಾನ್‌ ಹೆಬಳಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next