Advertisement

ನುಸಿ ರೋಗಕ್ಕೆ  ಗುಣಮಟ್ಟದ ಔಷಧ ವಿತರಿಸಿ

06:49 PM Aug 01, 2022 | Team Udayavani |

ಮುಳಬಾಗಿಲು: ತಾಲೂಕಿನಲ್ಲಿ ಹಿಪ್ಪು ನೇರಳೆ ಸೊಪ್ಪಿಗೆ ಬಾಧಿಸುತ್ತಿರುವ ನುಸಿ ರೋಗಕ್ಕೆ ಉಚಿತ ಗುಣಮಟ್ಟದಔಷಧಿಯನ್ನು ವಿತರಣೆ ಮಾಡಿ ಇಲಾಖೆಯಲ್ಲಿ ಖಾಲಿಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದುಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದ ರೇಷ್ಮೆ ಇಲಾಖೆ ಕಚೇರಿ ಎದುರು ರೋಗದ ಸೊಪ್ಪಿನ ಸಮೇತ ಪ್ರತಿಭಟನೆ ನಡೆಸಿದರು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ  ಗೌಡ ಈ ಸಂದರ್ಭದಲ್ಲಿ ಮಾತನಾಡಿದರು. ಕೃಷಿಕರು 100 ಮೊಟ್ಟೆ ರೇಷ್ಮೆ ಸಾಕಾಣಿಕೆ ಮಾಡಿ ಸ್ವಾಭಿಮಾನದ ಜೀವನ ಮಾಡುತ್ತಿದ್ದರು. ಇಂತಹ ಹಿಪ್ಪುನೇರಳೆ ಸೊಪ್ಪಿನ ತೋಟಗಳಿಗೆ 3 ತಿಂಗಳಿಂದ ಬಾಧಿಸುತ್ತಿರುವ ನುಸಿ ಹಾಗೂ ಬೊಬ್ಬೆ ರೋಗದಿಂದ ರೈತರುಸಂಕಷ್ಟಕ್ಕೀಡಾಗಿದ್ದು, ಸರ್ಕಾರದಿಂದ ಗುಣಮಟ್ಟದ ಔಷಧಿ ವಿತರಣೆ ಮಾಡಲಿ ಎಂದು ಇಲಾಖೆಯ ಅಧಿಕಾರಿಗಳ ಕಡೆ ಮುಖ ಮಾಡಿದ್ದಾರೆ.

ರೇಷ್ಮೆ ಇಲಾಖೆಯಲ್ಲಿ ಜಿಲ್ಲಾದ್ಯಂತ 214 ಜನ ಸಿಬ್ಬಂದಿಗೆ ಕೇವಲ 42 ಜನ ಮಾತ್ರ ಕೆಲಸನಿರ್ವಹಿಸುತ್ತಿದ್ದು, ಇನ್ನು 172 ಸಿಬ್ಬಂದಿ ಕೊರತೆಯಿದೆ, ಇದರಿಂದ ರೈತರಿಗೆ ಸಮರ್ಪಕವಾದ ಮಾಹಿತಿ ನೀಡಲು ಹಾಗೂ ಇಲಾಖೆಯಲ್ಲಿ ಕೆಲಸಗಳು ಆಗದೆತಿಂಗಳಾನುಗಟ್ಟಲೇ ಅಲೆಯಬೇಕಾದ ಪರಿಸ್ಥಿತಿ ಇದ್ದರೂ ಸರ್ಕಾರ ರೇಷ್ಮೆ ಇಲಾಖೆಯತ್ತ ಗಮನಹರಿಸದೇ ಇರುವುದು ದುರಾದೃಷ್ಟಕರ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌ಮಾತನಾಡಿ, ಕೇಂದ್ರ ಸರ್ಕಾರ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಜಲ್ಲಿ, ಸಿಮೆಂಟ್‌, ಕಂಬಿ ಹಾಗೂ ಕೂಲಿಕಾರ್ಮಿಕರ ವೆಚ್ಚ ಹೆಚ್ಚಿಸಿರುವುದರಿಂದ ಸರ್ಕಾರ ರೇಷ್ಮೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ 3ಲಕ್ಷ, 2.25 ಲಕ್ಷ ಹಾಗೂ 63 ಸಾವಿರದ ಅನುದಾನವನ್ನು ಕನಿಷ್ಠ ಪಕ್ಷ 5 ಲಕ್ಷಕ್ಕೆ ಏರಿಕೆ ಮಾಡಬೇಕು, ವರ್ಷದಿಂದ ಸ್ಥಗಿತವಾಗಿರುವಸೋಂಕು ನಿವಾರಕಗಳು, ಯಂತ್ರೋಪಕರಣಗಳಸಬ್ಸಿಡಿ ಹಣ ಬಿಡುಗಡೆ ಮಾಡಬೇಕು.ರೇಷ್ಮೆ ಬೆಳೆಗಾರರಿಗೆ ಅಗತ್ಯವಾಗಿ ಬೇಕಾಗಿದ್ದ ಪ್ಲಾಸ್ಟಿಕ್‌ ಚಂದ್ರಂಕಿ, ಮೆಸ್‌, ರೇಷ್ಮೆ ಮನೆ ಸ್ವಚ್ಛತೆಗೆಬ್ಲೀಚಿಂಗ್‌ ಪೌಡರ್‌, ಫಾರಂಲೈನ್‌ ಜೊತೆಗೆ ಹುಳರೋಗ ನಿಯಂತ್ರಣಕ್ಕೆ ಅವಶ್ಯಕತೆಯಿರುವ ಔಷಧಿಗಳನ್ನು ಮತ್ತು ಸಬ್ಸಿಡಿ ಧರದಲ್ಲಿ ನೀಡುತ್ತಿದ್ದ ಯಂತ್ರೋಪಕರಣಗಳ ಅನುದಾನದ ಹಣವನ್ನುಬಿಡುಗಡೆ ಮಾಡದೆ ರೇಷ್ಮೆ ಇಲಾಖೆಯನ್ನು ನಿರ್ಲಕ್ಷ್ಯಮಾಡುತ್ತಿದ್ದು, ಹೆಚ್ಚಿನ ಅನುದಾನವನ್ನು ಬಿಡುಗಡೆಮಾಡಬೇಕೆಂದು ಒತ್ತಾಯಿಸಿ ರೇಷ್ಮೆ ಸಹಾಯಕ ನಿರ್ದೇಶಕ ವೆಂಕಟೇಶಪ್ಪಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಪದ್ಮಘಟ್ಟ, ನಂಗಲಿ ನಾಗೇಶ್‌, ಕಿಶೋರ್‌, ಧರ್ಮಯುವ ರೈತ ಮುಖಂಡ ಪೊಂಬರಹಳ್ಳಿ ನವೀನ್‌,ವಿಭಾಗೀಯ ಕಾರ್ಯದರ್ಶಿ ಫಾರೂಖ್‌ಪಾಷ,ರಾಜ್ಯ ಮುಖಂಡ ಬಂಗಾರಿ ಮಂಜು, ತಾಲೂಕು ಪ್ರಧಾನ ಕಾರ್ಯದರ್ಶಿ, ಭಾಸ್ಕರ್‌, ವಿಶ್ವ, ಮೇಲಗಾಣಿ ವಿಜಯ್‌ ಪಾಲ್‌, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಯಲ್ಲಣ್ಣ,ಅಣ್ಣಿಹಳ್ಳಿ ನಾಗರಾಜ್‌, ಹೆಬ್ಬಣಿ ರಾಮಮೂರ್ತಿ,ಮಂಗಸಂದ್ರ ತಿಮ್ಮಣ್ಣ, ಕೇಶವ, ವೇಣು, ಸುನೀಲ್‌ ಕುಮಾರ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next