ಕೋಲಾರ: ರಾಷ್ಟ್ರ ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಕಪ್ಪು ಮಸಿ ಬಳಿದುಕಪ್ಪು ಮಸಿ ಬಳಿದ ಮತ್ತು ಮೋದಿ ಎಂದು ಜೈಕಾರ ಹಾಕಿ ಪ್ರಧಾನಿ ಮಂತ್ರಿಗಳ ಹೆಸರಿಗೆ ಕಳಂಕ ತಂದ ಕಿಡಿಗೇಡಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ರೈತಸಂಘದಿಂದ ಗ್ರೇಡ್ 2 ತಹಶೀಲ್ದಾರ್ ಹಂಸ ಮೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಹಂಸ ಮೇರಿ ರವರುಕೋಲಾರ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗಳ ಮೂಲಕ ಮನವಿ ಪತ್ರವನ್ನುರವಾನಿಸಲಾಗುವುದು ಎಂದು ತಿಳಿಸಿದರು. ಇದಕ್ಕೂಮುನ್ನ ರೈತ ಸಂಘದ ಪದಾಧಿಕಾರಿಗಳು ನಗರದ ಗಾಂಧಿ ವನದಲ್ಲಿ ಪ್ರತಿಭಟನೆ ಮಾಡಿದರು.
ಕರ್ನಾಟಕ ರಾಜ್ಯದಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಅದಕ್ಕೆ ಉದಾಹರಣೆಎಂಬಂತೆ ಮೇ 30ರಂದು ಸೋಮವಾರಂದುಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ರೈತಸಭೆಯಲ್ಲಿ ಏಕಾಏಕಿ ಪತ್ರಕರ್ತರ ಸೋಗಿಯಲ್ಲಿಬಂದು ರಾಷ್ಟ್ರ ರೈತ ನಾಯಕ ರಾಕೇಶ್ ಟಿಕಾಯತ್‌ರವರ ಮೇಲೆ ಹಲ್ಲೆ ಮಾಡಿ ಕಪ್ಪು ಮಸಿ ಬಳಿದು ಜೈಮೋದಿ ಎಂದು ಕೂಗಿದ ಕಿಡಿಗೇಡಿಗಳು ಹಾಕಿಮೋದಿಯವರಿಗೆ ಕೆಟ್ಟ ಹೆಸರು ತರಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ, ಕೋಲಾರ ಜಿಲ್ಲಾಧ್ಯಕ್ಷಕೊಲದೇವಿ ಗೋಪಾಲಕೃಷ್ಣಮೂರ್ತಿ, ಕೋಲಾರಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ,ಮುಳಬಾಗಿಲು ತಾಲೂಕು ಅಧ್ಯಕ್ಷಲಕ್ಷ್ಮೀನಾರಾಯಣಶೆಟ್ಟಿ, ಜಗನ್ನಾಥರೆಡ್ಡಿ, ಧನರಾಜ್,ಹನುಮಪ್ಪ, ತೇರಹಳ್ಳಿ ಚಂದ್ರಪ್ಪ, ದೊಡ್ಡಕುರುಬರಹಳ್ಳಿ ಶಂಕರೇಗೌಡ, ರೈತ ಮುಖಂಡ ವಿಶ್ವನಾಥರೆಡ್ಡಿ, ಮಮತಾ, ಆಶಾ, ರಾಧಮ್ಮ,ಪದ್ಮಮ್ಮ, ವಕ್ಕಲೇರಿ ರಮಾಮಣಿ ಇತರರಿದ್ದರು.