Advertisement

ಜಮೀನು ಪರಭಾರೆ ಆರೋಪ: ರೈತ ಸಂಘಪ್ರತಿಭಟನೆ

09:26 PM Nov 14, 2020 | Suhan S |

ಮುಳಬಾಗಿಲು: ವೀರಭದ್ರ ನಗರದ ಸರ್ವೆ ನಂಬರ್‌92/3ರಲ್ಲಿನ 1.12 ಎಕರೆ ದಲಿತರ ಜಮೀನನ್ನು ನಗರಸಭೆ ಅಧಿಕಾರಿಗಳು ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪ್ರೊ.ನಂಜುಂಡಸ್ವಾಮಿ ಬಣದ ಕಾರ್ಯಕರ್ತರು ನಗರದ ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ರಾಜಶೇಖರ್‌ಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿಮಾತನಾಡಿದ ಸಂಘದಜಿಲ್ಲಾಧ್ಯಕ್ಷ ರಾಮಶಿವಣ್ಣ, ಮುಳಬಾಗಿಲಿನ ವೀರಭದ್ರನಗರದಚಂದ್ರಶೇಖರ್‌ ತಮ್ಮ ತಾತ ಗುರುವನಭೋವಿ ಹೆಸರಿಗೆ ಸರ್ವೆ ನಂಬರ್‌92/3ರಲ್ಲಿನ1.12 ಎಕರೆ ಜಮೀನಿದ್ದು ,ಸದರಿ ಜಮೀನಿನಲ್ಲಿ ಹಲವಾರು ದಶಗಳಿಂದ ಕೃಷಿಚಟುವಟಿಕೆಗಳನ್ನು ಕೈಗೊಳ್ಳುತ್ತಾ ಸ್ವಾಧೀನದಲ್ಲಿರುತ್ತಾರೆ. ಆದರೆ ಸದರಿ ಜಮೀನನ್ನು ಕಬಳಿಸಲು ನಗರಸಭೆ ಅಧಿಕಾರಿಗಳುಕಂದಾಯ ಇಲಾಖೆಕೆಲವು ಅಧಿಕಾರಿಗಳ ಸಹಕಾರದೊಂದಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ದಲಿತರ ಜಮೀನನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಇಂತಹ ಅಕ್ರಮಗಳಿಗೆ ಅವಕಾಶ ನೀಡದೆ ತಹಶೀಲ್ದಾರ್‌ ಅವರು ಜಮೀನನ್ನು ಗುರ್ತಿಸಿಕೊಡಬೇಕು. ತಪ್ಪಿದಲ್ಲಿ ಸದರಿ ಕುಟುಂಬಸ್ಥರು ಇದೇ ಕಚೇರಿ ಬಳಿಯೇ ಆತ್ಮಹತ್ಯೆಗೆ ಶರಣಾಗುವುದಾಗಿಎಚ್ಚರಿಸಿ ಮನವಿ ಸಲ್ಲಿಸಿದರು.

ಕಾರ್ಯಾಧ್ಯಕ್ಷ ಪ್ರಸ್‌ ಗಣೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಎಲ್‌.ಎನ್‌.ಬಾಬು, ಉಪಾಧ್ಯಕ್ಷ ನಂದಕುಮಾರ್‌, ಜಿಲ್ಲಾ ಮುಖಂಡ ಕೊಲದೇವಿ ಗೋಪಾಲಕೃಷ್ಣ, ಸುಣ್ಣಕಲ್‌ ಗಂಗಾದರ್‌, ಶ್ರೀನಾಥ್‌, ಚಂದ್ರಶೇಖರ್‌, ಕೃಷ್ಣಪ್ಪ ಸೇರಿದಂತೆ ಜಮೀನಿಗೆ ಸಂಬಂಧಿಸಿದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next