Advertisement

ಅಧಿಕಾರಿಗಳಿಂದ ರೈತರಿಗೆ ವಂಚನೆ

04:25 PM Oct 17, 2020 | Suhan S |

ಶ್ರೀನಿವಾಸಪುರ: ರೈತರ ಪರವಾಗಿ ಕೆಲಸ ಮಾಡಬೇಕಾದ ಅಧಿಕಾರಿಗಳು ದಲ್ಲಾಳಿಗಳ ಪರವಾಗಿ ಕೆಲಸ ಮಾಡಿ ಬೇನಾಮಿ ಹೆಸರುಗಳಲ್ಲಿ ನಿಜವಾದ ರೈತರನ್ನು ವಂಚಿಸಿ ದ್ರೋಹ ಮಾಡುತ್ತಿದ್ದಾರೆಂದು ರಾಜ್ಯ ರೈತ ಸಂಘಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಎಸ್‌.ಜಿ.ವೀರಭದ್ರ ಸ್ವಾಮಿ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪಿಸಿದರು.

Advertisement

ಶ್ರೀನಿವಾಸಪುರ ಕೃಷಿ ಇಲಾಖೆಕಚೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿಯಿಂದ ಕೃಷಿ ಇಲಾಖೆ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕ್ಷೇತ್ರದಲ್ಲಿಶಾಸಕರ ಹಿಡಿತವಿಲ್ಲದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸದರಿ ಕಚೇರಿಯಲ್ಲಿನ ಪ್ರಥಮ ದರ್ಜೆ ಸಹಾಯಕ ವಿಜಯಕುಮಾರ್‌ ಯದವಾಡ ಎಂಬುವರು 36 ಮಂದಿರೈತರ ಸಹಿ ಹಾಗೂ ಮೊಬೈಲ್‌ ನಂಬರ್‌ ತೆಗೆದುಕೊಂಡು ಸೌಲಭ್ಯ ಕಲ್ಪಿಸದೇಬೇನಾಮಿ ಹೆಸರುಗಳಿಗೆ ಮಾಡಿ ಲಂಚಕ್ಕೆ ಶರಣಾಗಿದ್ದಾರೆಂದು ಆರೋಪಿಸಿದರು.

ಸಂಘದ ತಾಲೂಕು ಅಧ್ಯಕ್ಷ ಎನ್‌.ಜಿ. ಶ್ರೀರಾಮರೆಡ್ಡಿ ಮಾತನಾಡಿ, ರೈತರ ಹೆಸರುಗಳಲ್ಲಿ ಬೇರೆಯವರ ಹೆಸರು ಸೇರಿಸಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು.

ಕಚೇರಿಗಳಲ್ಲಿ ಶಿಕ್ಷೆಗೆ ಒಳಗಾದವರನ್ನು ಪರ್ಯಾಯಕಚೇರಿಗಳಲ್ಲಿ ನಿಯೋಜನೆಮಾಡುವುದರಿಂದ ಅವರು ಹಳೇ ಚಾಳಿ ಬಿಡುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು. ಇದೇ ವೇಳೆ ಕೃಷಿಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಮನವಿ ಪತ್ರವನ್ನು ಇಲಾಖೆ ಸಹಾಯಕ ನಿರ್ದೇಶಕ ಧನಂಜಯ ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬೈರಾರೆಡ್ಡಿ, ಸಿ.ಎಂ. ಶ್ರೀಧರ್‌, ಜಿ.ಎಂ.ಅಶ್ವತ್ಥ್, ಕೆ.ಶ್ರೀನಿವಾಸ ರೆಡ್ಡಿ, ಸಿ.ವಿ.ದೇವರಾಜ್‌, ನಂಜುಂಡಪ್ಪ, ರಾಜಣ್ಣ,ಎನ್‌.ಬಿ.ನರಸಿಂಹಯ್ಯ,ಎಚ್‌. ಎಸ್‌.ರಮೇಶ್‌, ಜಿ.ವೆಂಕಟರವಣ, ಯಲ್ಲಪ್ಪ ಭಾಗವಹಿಸಿದ್ದರು.

Advertisement

ಕೃಷ್ಣಾನದಿ ನೀರು ಮುಳಬಾಗಿಲು ಕೆರೆಗೆ :

ಮುಳಬಾಗಿಲು: ಆಂಧ್ರದ ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಗಡಿ ಗ್ರಾಮಗಳ ಕೆರೆಗಳಿಗೆ ನೆರೆಯ ಆಂಧ್ರಪ್ರದೇಶದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರು ಹರಿಸಲು ಸರ್ಕಾರದಮೇಲೆ ಒತ್ತಡ ಹಾಕಿ ಕೆಲಸ ಮಾಡುವೆಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

ತಾಲೂಕಿನ ಗುಮ್ಮಕಲ್‌ ಗ್ರಾಪಂವ್ಯಾಪ್ತಿಯ ಸಾರ್ವಜನಿಕರ ಕುಂದು ಕೊರತೆ ಸ್ವೀಕರಿಸಿ ಮಾತನಾಡಿದ ಅವರು, ನೆರೆಯ ಆಂಧ್ರ ನಮ್ಮ ತಾಲೂಕಿನ ಕೂಗಳತೆ ದೂರದಲ್ಲಿದೆ. ಹಾಗಾಗಿ ಪಕ್ಕದಲ್ಲಿ ಕಾಲುವೆಗಳ ಮೂಲಕ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನು ಹತ್ತಿರದಲ್ಲಿರುವ ಗ್ರಾಮಗಳ ಕೆರೆಗಳಿಗೆ ಹರಿಸಲು ರಾಜ್ಯ ಸರ್ಕಾರದ ಮೂಲಕ ಒತ್ತಡ ಏರಿ ನೆರೆಯ ಆಂಧ್ರ ಪ್ರದೇಶ ಸರ್ಕಾರದಿಂದ ಸ್ಪಂದನೆ ಸಿಗಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಸಚಿವನಾದ ನಂತರ ತಾಲೂಕಿನಲ್ಲಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕೆಂಬ ಆಲೋಚನೆ ಹೊಂದಿದ್ದೆ. ಪ್ರಸ್ತುತ ಮಾಡುತ್ತಿರುವ ಗ್ರಾಪಂ ವ್ಯಾಪ್ತಿಯ ಕುಂದುಕೊರತೆಸಭೆಗಳಲ್ಲಿ ಸಾರ್ವಜನಿಕರಿಂದಸಿಗುತ್ತಿರುವ ಬೆಂಬಲ, ಪ್ರೋತ್ಸಾಹ ನನ್ನನ್ನು ಮತ್ತಷ್ಟು ಕೆಲಸ ಮಾಡುವ ಕಡೆಕೊಂಡೊಯ್ಯುತ್ತಿದೆ ಎಂದರು.

ಟಿಎಪಿಎಂಸಿ ಅಧ್ಯಕ್ಷ ಆಲಂಗೂರು ಶಿವಣ್ಣ, ಬಿಜೆಪಿ ಹಿರಿಯ ಮುಖಂಡಸುರೇಂದ್ರಗೌಡ, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌,ಕಾಂಗ್ರೆಸ್‌ಮುಖಂಡ ಗುಮ್ಮಕಲ್ಲು ರಾಮಿರೆಡ್ಡಿ, ಶಂಕರ್‌ರೆಡ್ಡಿ, ಮಂಡಿಕಲ್‌ ವೆಂಕಟಾಚಲಪತಿ, ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿವೆಂಕಟೇಶ್‌, ಜಗದೀಶ್‌, ಸದಸ್ಯ ಜಯರಾಮರೆಡ್ಡಿ, ಆವಣಿ ವಿಜಿ ಈ ಸಂದರ್ಭದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next