ದೊಡ್ಡಬಳ್ಳಾಪುರ: ರೈತರಿಗಾಗಿ ಇರುವ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೃಷಿ ಅಭಿಯಾನ ಪ್ರಮುಖ ಪಾತ್ರ ವಹಿಸಲಿದ್ದು, ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮುಂಗಾರು 2022 ನೋಂದಾಯಿಸಿಕೊಳ್ಳಬೇಕಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ಕೃಷಿ ಅಭಿಯಾನ, ಪಿಎಂ ಕಿಸಾನ್ ಯೋಜನೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ, ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸವಲತ್ತುಗಳ ಕುರಿತ ಕಾರ್ಯಾಗಾರ ಹಾಗೂ ಕೃಷಿ ಅಭಿಯಾನದಲ್ಲಿ ಮಾತನಾಡಿ, ರೈತರಿಗೆ ಆಧುನಿಕ ಕೃಷಿ ಪದ್ಧತಿ, ಬೀಜಗಳ ಸಂರಕ್ಷಣೆ, ಯಾವ ರೀತಿಯ ರಸಗೊಬ್ಬರ ಹಾಕಬೇಕು, ರೈತರಿಗೆ ಸರ್ಕಾರದಿಂದ ತಂದಿರುವ ಯೋಜನೆಗಳನ್ನು ಕಾರ್ಯಕ್ರಮದಲ್ಲಿ ತಿಳಿಸಲಾಗುತ್ತದೆ ಎಂದರು.
ಕೃಷಿ ಇಲಾಖೆಯಿಂದ ಕೊಳ್ಳುವ ವ್ಯವಸಾಯ ಯಂತ್ರಗಳಿಗೆ ಸಹಾಯಧನ ದೊರೆಯಲಿದೆ. ರೈತರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕೃಷಿ ಇಲಾಖೆ ಸೌಲಭ್ಯಗಳ ಕುರಿತಾಗಿ ಮಾಹಿತಿ ಪಡೆಯಬೇಕಿದೆ. ರೈತರಿಗೆ ಉಂಟಾ ಗುವ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ಫಸಲ್ ಬಿಮಾ ಯೋಜನೆ ಸಹಕಾರಿಯಾಗಿದ್ದು, ರೈತರು ಇದರ ಸದು ಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.
ತಂತ್ರಜ್ಞಾನಗಳ ಬಗ್ಗೆ ಅರಿವು: ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವೆಂಕಟೇಗೌಡ ಮಾತನಾಡಿ, ರೈತರು ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಹೊಂದ ಬೇಕು. ಮಣ್ಣಿನ ಪರೀಕ್ಷೆ, ಬೀಜೋಪಚಾರಗಳ ಬಗ್ಗೆ ಮಾಹಿತಿ ಪಡೆಯಬೇಕು. ಸೂಕ್ತ ತಳಿಗಳ ಆಯ್ಕೆ ಮಾಡಬೇಕಿದ್ದು, ಕೀಟನಾಶಕಗಳ ಬಳಕೆಯನ್ನು ಎಚ್ಚರಿಕೆಯಿಂದ ಮಾಡಬೇಕು ಎಂದ ಅವರು, ರಾಗಿ ಹಾಗೂ ಮುಸುಕಿನ ಜೋಳದ ಬೆಳೆಗಳ ಸಂರಕ್ಷಣೆ ಕುರಿತಾಗಿ ಮಾಹಿತಿ ನೀಡಿದರು.
Related Articles
ಫಸಲು ಬಿಮಾ ಯೋಜನೆ: ಬಜಾಜ್ ಫೈನಾನ್ಸ್‌ನ ಜಿಲ್ಲಾ ಸಂಯೋಜಕ ಅಚ್ಯುತ್ ನಾಯಕ್, ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ ಕುರಿತು ಮಾಹಿತಿ ನೀಡಿದರು.
ಕೃಷಿಕ ಸಮಾಜದ ಅಧ್ಯಕ್ಷ ಆಂಜಿನ ಗೌಡ, ಉಪಾ ಧ್ಯಕ್ಷ ಎಳ್ಳುಪುರ ರಾಮಾಂಜಿನಪ್ಪ, ನಿರ್ದೇಶಕ ಗೋಪಾಲ್, ಮುನಿಯಪ್ಪ, ತೋಟಗಾರಿಕೆ ಇಲಾಖೆ ಯ ಹಿರಿಯ ಸಹಾಯಕ ನಿರ್ದೇಶಕಿ ದೀಪಾ, ಸಿಡಿಪಿಒ ಅನಿತಾಲಕ್ಷ್ಮೀ, ಎಪಿಎಂಸಿ ಕಾರ್ಯ ದರ್ಶಿ ಅಬಿದಾ ಅಂಜುಮ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ರೂಪಾ, ಸಹಾಯಕ ಕೃಷಿ ಅಧಿ ಕಾರಿ ಲಿಂಗಯ್ಯ, ಪಶು ವೈದ್ಯಾಧಿಕಾರಿ ಡಾ. ವಿಶ್ವನಾಥ್, ಕೊಡಿಗೆಹಳ್ಳಿ ಗ್ರಾಪಂ ಸದಸ್ಯೆ ನಾಗ ರತ್ನಮ್ಮ, ವಿವಿಧ ಹೋಬಳಿ ಕೃಷಿ ಅಧಿಕಾರಿಗಳಾದ ಹರೀಶ್, ಎನ್. ಗೀತಾ, ನವೀನ್, ಗೀತಾ, ಕಸ್ತೂರಯ್ಯ ಇದ್ದರು.