Advertisement

ಕಳ್ಳಿಲಿಂಗಸುಗೂರು-ಮುದಗಲ್‌ ರಸ್ತೆ ನಿರ್ಮಾಣಕ್ಕೆ ರೈತರ ವಿರೋಧ

05:46 PM Jan 26, 2022 | Team Udayavani |

ಲಿಂಗಸುಗೂರು: ತಾಲೂಕಿನ ಕಳ್ಳಿಲಿಂಗಸುಗೂರು- ಮುದಗಲ್‌ ರಸ್ತೆ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಕಳ್ಳಿಲಿಂಗಸುಗೂರು-ಮುದಗಲ್‌ 10 ಮೀಟರ್‌ ಅಗಲದ ರಸ್ತೆ ನಿರ್ಮಾಣ ಮಾಡಬೇಕಿದ್ದರಿಂದ ರಸ್ತೆಗಾಗಿ ಜಮೀನು ಹೋಗುತ್ತಿವೆ. ಹೀಗಾಗಿ ಅಕ್ಕಪಕ್ಕದ ಜಮೀನಿನ ರೈತರು ರಸ್ತೆಗಾಗಿ ನಮ್ಮ ಜಮೀನು ಕಳೆದುಕೊಳ್ಳಲು ಇಷ್ಟವಿಲ್ಲವೆಂದು ವಿರೋಧ ವ್ಯಕ್ತಪಡಿಸಿದರು.

Advertisement

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಈ ರಸ್ತೆಯನ್ನು ಸೆಟ್‌ ಲೈಟ್‌ ಮೂಲಕ ಸರ್ವೇ ಮಾಡಲಾಗಿದೆ. ಕೇಂದ್ರ ಸರ್ಕಾರ ರೈತರು ಜಮೀನುಗಳಿಗೆ ತೆರಳಲು ಒಳ್ಳೆಯ ರಸ್ತೆ ಮಾಡುತ್ತಿದೆ ವಿನಃ ಇದರಿಂದ ಯಾರಿಗೂ ತೊಂದರೆ ಕೊಡುವ ಉದ್ದೇಶವಿಲ್ಲ. ವಿನಾಕಾರಣ ಕಾಮಗಾರಿಗಳಿಗೆ ತೊಂದರೆ ನೀಡುವುದು ಸರಿಯಾದ ಕ್ರಮವಲ್ಲ. ಭೂಮಿಗೆ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದೆ. ಅದು ನಮ್ಮ ಮಟ್ಟದಲ್ಲಿ ಇಲ್ಲ. ಸಣ್ಣ ಪುಟ್ಟ ಸಮಸ್ಯೆ ಇದ್ದರೆ ನಾವು ಪರಿಹರಿಸಬಹುದು. ಗ್ರಾಮದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next