Advertisement

ಕರ್ನಾಟಕದ ರೈತರು ಭತ್ತ, ಕಬ್ಬು ಬೆಳೆಯಬಾರದು! ತಮಿಳುನಾಡು ಸಲಹೆ

04:43 PM Aug 09, 2017 | Sharanya Alva |

ನವದೆಹಲಿ:ಕಾವೇರಿ ಕಣಿವೆ ಪ್ರದೇಶದ ರೈತರು ಕಬ್ಬು ಮತ್ತು ಭತ್ತ ಬೆಳೆಯಬಾರದು. ಕಬ್ಬು ಮತ್ತು ಭತ್ತ ಬೆಳೆಯಲು ಕರ್ನಾಟಕದ ಮಣ್ಣು ಸೂಕ್ತವಾಗಿಲ್ಲ. ಹಾಗಾಗಿ ರಾಗಿ, ಜೋಳ ಬೆಳೆಯಬೇಕು…ಇದು ಕರ್ನಾಟಕಕ್ಕೆ ನೆರೆಯ ತಮಿಳುನಾಡಿನ ಸಲಹೆ!

Advertisement

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಬುಧವಾರ ವಿಚಾರಣೆ ನಡೆದ ಸಂದರ್ಭದಲ್ಲಿ ತಮಿಳುನಾಡು ಪರ ವಕೀಲರು ಈ  ಸಲಹೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕರ್ನಾಕಟದ ರೈತರು ರಾಗಿ, ಜೋಳ ಸೇರಿದಂತೆ ಬೇರೆ ಬೆಳೆಗಳನ್ನು ಬೆಳೆಯಲಿ. ಭತ್ತ, ಕಬ್ಬು ಬೆಳೆಯುವುದರಿಂದ ನಮಗೆ ನಮ್ಮ ಪಾಲಿನ ನೀರು ಸಿಗುತ್ತಿಲ್ಲ ಎಂದು ತಮಿಳುನಾಡು ವಾದ ಮಂಡಿಸಿದೆ. ಏತನ್ಮಧ್ಯೆ ಮೇಕೆದಾಟು ಯೋಜನೆಗೆ ಏಕೆ ಆಕ್ಷೇಪ ವ್ಯಕ್ತಪಡಿಸುತ್ತೀರಿ ಎಂದು ಸುಪ್ರೀಂಕೋರ್ಟ್ ಪೀಠ ತಮಿಳುನಾಡನ್ನು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next