Advertisement

ಅಡಕೆ ಧಾರಣೆ ಬಗ್ಗೆ ರೈತರಲ್ಲಿ ಯಾವುದೇ ಆತಂಕ ಪಡುವುದು ಬೇಡ: ಆರಗ ಜ್ಞಾನೇಂದ್ರ

11:03 AM Jun 18, 2022 | Team Udayavani |

ಬೆಂಗಳೂರು: ಅಡಕೆ ಧಾರಣೆ ಬಗ್ಗೆ ರೈತರಲ್ಲಿ ಯಾವುದೇ ಆತಂಕ ಪಡುವುದು ಬೇಡ ಎಂದಿರುವ ಗೃಹ ಸಚಿವ ಹಾಗೂ ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ, ಕೇಂದ್ರ ಸರಕಾರವು ನಿಗದಿಪಡಿಸಿದ ಅಡಕೆ ಬೆಲೆಯ ಅಂದಾಜು ವೆಚ್ಚವನ್ನು ಪರಿಷ್ಕರಿಸಿ ಹೆಚ್ಚಳ ಮಾಡುವಂತೆ, ಒತ್ತಾಯಿಸಲು ಕೇಂದ್ರಕ್ಕೆ ನಿಯೋಗವನ್ನು ತೆಗೆದುಕೊಂಡು ಹೋಗಲಾಗುತ್ತದೆ ಎಂದಿದ್ದಾರೆ.

Advertisement

ರಾಜ್ಯದ ಮಲೆನಾಡು ಭಾಗದ ಲಕ್ಷಾಂತರ ರೈತ ಹಾಗೂ ರೈತ_ಕಾರ್ಮಿಕ ಕುಟುಂಬಗಳ ಆರ್ಥಿಕ ಬೆನ್ನೆಲುಬಾಗಿರುವ ಅಡಕೆ ಬೆಳೆಗೆ ಸುಸ್ಥಿರ ಬೆಲೆಯನ್ನೊದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ಈ ಕುರಿತು ರೈತ ಸಮುದಾಯ ಯಾವುದೇ ಆತಂಕ ಪಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಹಣದುಬ್ಬರ ಹಾಗೂ ಇನ್ನಿತರ ಕಾರಣಗಳಿಂದಾಗಿ ಅಡಕೆ ಬೆಳೆ ಉತ್ಪಾದನಾ ವೆಚ್ಚವೂ ಹೆಚ್ಚಿದ್ದು ಪ್ರಸ್ತುತ ಪ್ರತಿ ಕಿಲೋ ಅಡಕೆ ಅಂದಾಜು ವೆಚ್ಚ 25 ರೂ ರಷ್ಟಿದ್ದು, ಸುಮಾರು ಆರು ವರ್ಷಗಳ ಹಿಂದೆ ನಿಗದಿ ಪಡಿಸಲಾಗಿದೆ. ಹಾಗೂ ಪುನಃ ಪರಿಷ್ಕರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಪಂಚಾಯಿತಿ ಅಧ್ಯಕ್ಷನಾದ ದಿನವೇ ಮದುವೆಯಾದ!

ಈ ಹಿಂದೆ ಕೇಂದ್ರ ಸರಕಾರ ದೇಶಿಯ ಅಡಿಕೆ ಉತ್ಪನ್ನ ಅಂದಾಜು ವೆಚ್ಚವನ್ನು ಹೆಚ್ಚಳ ಮಾಡಿದಾಗ, ವಿದೇಶದಿಂದ ಅಮದಾಗುತ್ತಿದ್ದ ಕಡಿಮೆ ಗುಣಮಟ್ಟದ ಅಡಿಕೆ ಪ್ರಮಾಣ ಗಣನೀಯವಾಗಿ ತಗ್ಗಿತ್ತು. ವಿದೇಶದಿಂದ ಆಮದಾಗುವ ಅಡಿಕೆ ಗುಣಮಟ್ಟದಲ್ಲಿ ಅತ್ಯಂತ ನಿಕೃಷ್ಟವಾಗಿದ್ದು ದೇಶಿಯ ಅಡಿಕೆ, ಗುಣಮಟ್ಟದಲ್ಲಿ ಆತ್ಯುಕೃಷ್ಟವಾಗಿದೆ ಎಂದರು.

Advertisement

ಕೇಂದ್ರ ಕೃಷಿ ಸಚಿವರನ್ನು ರಾಜ್ಯ ಟಾಸ್ಕ್ ಫೋರ್ಸ್ ನಿಯೋಗ ಭೇಟಿಯಾಗಿ, ಅಡಿಕೆ ಉತ್ಪನ್ನ ಅಂದಾಜು ವೆಚ್ಚ ಪರಿಷ್ಕರಿಸಿ ಹೆಚ್ಚಳ ಮಾಡಲು ಮನವರಿಕೆ ಮಾಡಿ ಕೊಡಲಾಗುವುದು, ರೈತರು ಅಡಿಕೆ ಧಾರಣೆ ಬಗ್ಗೆ ಯಾವುದೇ ಆತಂಕ ಹಾಗೂ ಭಯಪಡುವುದು ಬೇಡ ಎಂದು ಸಚಿವರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next