Advertisement

ಗುಣಮಟ್ಟದ ಇಳುವರಿ ತೆಗೆಯುವಲ್ಲಿ ರೈತರು ವಿಫಲ

02:37 PM Aug 31, 2017 | |

ಬಾಳೆಹೊನ್ನೂರು: ಕಾಳು ಮೆಣಸು ಬೆಳೆಗಾರರು ಉತ್ಪಾದನೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದರೂ ಗುಣಮಟ್ಟದ ಹೆಚ್ಚಿನ ಇಳುವರಿ ತೆಗೆಯುವಲ್ಲಿ ವಿಫಲರಾಗುತಿದ್ದಾರೆ, ಅಲ್ಲದೆ ಮೂಲಭೂತ ಅಂಶವಾದ ಮಣ್ಣು ಪರೀಕ್ಷೆ, ನೀರು ನಿರ್ವಹಣೆ, ನೂತನ ತಾಂತ್ರಿಕತೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಸಂಪನ್ಮೂಲ ವ್ಯಕ್ತಿ ಡಾ|ಎಂ.ನಾರಾಯಣ ತಿಳಿಸಿದರು.

Advertisement

ಅವರು ಬಾಳೆಹೊನ್ನೂರಿನ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಹಾಗೂ ಬೆಂಗಳೂರು ಮಲ್ಟಿಪ್ಲೆಕ್ಸ್‌ ಸಮೂಹ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಭಾಗದ ರೈತರಿಗಾಗಿ ಅಯೋಜಿಸಿದ್ದ ಕಾಳು ಮೆಣಸಿನ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದರು. ಕಾಳು ಮೆಣಸಿನ ಬಳ್ಳಿಯ ಬೆಳವಣಿಗೆ, ಹೂ ಗೊಂಚಲುಗಳ ಉತ್ಪತ್ತಿ, ಗುಣಮಟ್ಟದ ಉತ್ತಮ ಇಳುವರಿ ಬರಲು ಸಹಾಯವಾಗಬಲ್ಲ ವಿಶೇಷ ಉತ್ಪನ್ನವನ್ನು ತಯಾರಿಸಿ ಹಲವು ಕೃಷಿ ಪರಿಸರಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿದೆ. ಉತ್ತಮ ಫಲಿತಾಂಶ ಕಂಡು ರೈತರ
ಪ್ರಶಂಸೆಗೆ ಪಾತ್ರವಾದ ನಂತರ “ಮಲ್ಟಿಪ್ಲೆಕ್ಸ್‌ ಸ್ಪೆಷಲ್‌’ ಎಂಬ ಹೆಸರಿನ ಸಮತೋಲನ ಪೋಷಕಾಂಶಗಳ ಮಿಶ್ರಣ ಬಳಸಿ ಕಾಳು ಮೆಣಸಿನ ಬೆಳೆಗಳ ನಿರ್ವಹಣೆ ಹಾಗೂ ಇಳುವರಿ ಪಡೆಯುವ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. 

ರೋಟರಿ ಸಂಸ್ಥೆಯ ಅಸಿಸ್ಟೆಂಟ್‌ ಗೌರ್ನರ್‌ ಜಿ.ಎಸ್‌.ಮಹಾಬಲರಾವ್‌ ಕಾಳು ಮೆಣಸಿನ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯುವುದರ ಮುಖಾಂತರ ರೈತರು ತಮ್ಮ
ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿದೆ ಎಂದರು. 

ರೋಟರಿ ಜೋನಲ್‌ ಲೆಪ್ಟಿನೆಂಟ್‌ ಕೆ.ಟಿ.ವೆಂಕಟೇಶ್‌ ಪ್ರಾಸ್ತಾವಿಕ ಮಾತನಾಡಿದರು. ರೋಟರಿ ಅಧ್ಯಕ್ಷ ಕೆ.ಆರ್‌.ಪ್ರದೀಪ್‌ ಪಟೇಲ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಕೃಷಿಕರಾದ ಬಿ.ಎಂ.ಶಿವಣ್ಣಗೌಡ, ಎಂ.ಎಲ್‌.ಮಂಜೇಶ್‌, ಟಿ.ಸುರೇಶ್‌, ಎಸ್‌.ಜಿ.ಕೃಷ್ಣಮೂರ್ತಿ, ರಮೇಶ್‌, ವಿಲಾಸ್‌ ಕುಡ್ವ, ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಟಿ.ಎಂ. ಉಮೇಶ್‌, ವಿಲಿಯಂಡೇಸಾ ಸೇರಿದಂತೆ ಸುತ್ತಮುತ್ತಲ ಕೃಷಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next