Advertisement

ರೈತರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ: ಸತೀಶ

02:49 PM Jan 28, 2021 | Team Udayavani |

ಗೋಕಾಕ:ದೆಹಲಿಯ ಕೆಂಪುಕೋಟೆ ಮೇಲೆ ರೈತ ಸಂಘಟನೆಗಳವರು ತಮ್ಮ ಧ್ವಜ ಹಾರಿಸಿದ್ದಾರೆ ಹೊರತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ. ರೈತರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಬುಧವಾರ ನಗರದ ಹಿಲ್‌ ಗಾರ್ಡನ್‌ ಆವರಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯಿಂದ ಯಮಕನಮರಡಿ ಕ್ಷೇತ್ರದ 15 ವಿಕಲಚೇತನ ಫಲಾನುಭವಿಗಳಿಗೆನೀಡಲಾದ ತ್ರಿಚಕ್ರ ವಾಹನ ವಿತರಿಸಿ  ಮಾತನಾಡಿದ ಅವರು, ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ ರೈತರ ನೋವನ್ನು ಅರಿತು ಜವಾಬ್ದಾರಿಯಿಂದ ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಕೃಷಿ ಸಚಿವರು ಹಾದಿ ಬೀದಿಯಲ್ಲಿ ಜನಸಮಾನ್ಯರು ಮಾತನಾಡುವ ಹಾಗೆ ಮಾತನಾಡುವುದು ಸರಿಯಲ್ಲ. ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಹೋರಾಟ ನಡೆಸುವುದು ರೈತರ ಹಕ್ಕಾಗಿದೆ. ರೈತರ ಹೋರಾಟ ಪಕ್ಷಾತೀತ. ಇದರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಪ್ರತಿಭಟನೆ ಹತ್ತಿಕ್ಕುವ ಕಾರ್ಯವನ್ನು ಮಾಡದೆ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ:ರೈಲಿಗಾಗಿ ಇಳಕಲ್ಲ ಜನ ಸಮಿತಿ ಮನವಿ

ಈ ಸಂದರ್ಭದಲ್ಲಿ ಹುದಲಿ ತಾ.ಪಂ ಸದಸ್ಯ ಅಜ್ಜಪ್ಪ ಮಳಗಲಿ, ಮುಖಂಡರಾದ ಅಡಿವೆಪ್ಪ ಮಾಳಗಿ, ಚನ್ನಬಸು ಪವಾಡಿ, ಕರೆಪ್ಪ ನಾಯಿಕ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next