Advertisement

ಕಾಡಾನೆ ಹಾವಳಿಗೆ ರೈತರು ಆತಂಕ ಪಡಬೇಕಿಲ್ಲ : ಶಾಸಕ ಬೋಪಯ್ಯ

12:30 AM Feb 02, 2019 | Team Udayavani |

ಗೋಣಿಕೊಪ್ಪಲು: ತಿತಿಮತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಮೂರು ಕೋಟಿ ಅನುಧಾನದಲ್ಲಿ ರೈಲ್ವೆ ಕಂಬಿ ಅಳವಡಿಸಲು ಇಲಾಖೆ ಈ ಹಿಂದೆ ನಿರ್ದರಿಸಿದ ಕ್ರಮದಲ್ಲೆ ಕಂಬಿ ಅಳವಡಿಗೆ ನಡೆಯಲಿದೆ. ಬೆಳೆಗಾರರರು ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದ್ದಾರೆ. 

Advertisement

ತಿತಿಮತಿ ಜಂಗಲ್‌ ಹಾಡಿಯ ಅರಣ್ಯದ ಅಂಚಿಗೆ ಸ್ಥಳೀಯ ರೈತರ ಮನವಿ ಮೇರೆಗೆ ಭೇಟಿ ನೀಡಿದ ಶಾಸಕರು ಈ ಹಿಂದೆ ಆನೆ ನಿಯಂತ್ರಣಕ್ಕೆ ಅಳವಡಿಸುವ ರೈಲು ಕಂಬಿಯನ್ನು ಅಳವಡಿಸುವ ಬದಲಾವಣೆಯನ್ನು ಕಂಡಿಸಿ ಪ್ರತಿಭಟಿಸಿದ ರೈತರಲ್ಲಿ ಈ ಬಗೆ ಪ್ರಸ್ಥಾಪಿಸಿದಾರೆ. ಕೋಟಿ ವೆಚ್ಚಲ್ಲಿ ನಿರ್ಮಾಣವಾಗುತ್ತಿರುವ ರೈಲು ಕಂಬಿ ಅಳವಡಿಕೆ ಸಂಬಂಧಪಟ್ಟಂತೆ  ಉನ್ನತ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈ ಸಂದರ್ಭ ತಿತಿಮತಿ ವ್ಯಾಪ್ತಿಯಲ್ಲಿ ಅಳವಡಿಸಲು ಮುಂದಾಗಿರುವ ವ್ಯವಸ್ಥೆಯನ್ನೆ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದರು. 

ತಿತಿಮತಿ ಭಾಗದ ಸುತ್ತಮುತ್ತ ಕಾಡಾನೆ ಹಾವಳಿಯಿಂದ ರೈತರು ಕಂಗಾಲಾಗಿದ್ದರು. ಪ್ರಾಣ ಹಾನಿಯು ಸಂಭವಿಸಿತು. ಈ ವಿಚಾರವಾಗಿ ಪ್ರತಿಭಟನೆ ತೀವ್ರತೆಯನ್ನು ಪಡೆದುಕೊಂಡಿತು. ಈ ಸಂದರ್ಭ ತಿತಿಮತಿ ಭಾಗದ ಅರಣ್ಯದ ಅಂಚಿನಲ್ಲಿ ರೈಲು ಕಂಬಿ ಅಳವಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿತು. ಆದರೆ, ರೈಲ್ವೆ ಕಂಬಿ ಅಳವಡಿಕೆಯಲ್ಲಿ ಮಾರ್ಗ ಬದಲಾಯಿಸಿರುವ ಬಗೆ ಹಸಿರು ಸೇನೆ, ರಾಜ ರೈತ ಸಂಘ, ಮುಖಂಡರು ಜಂಗಲ್‌ ಹಾಡಿಯ ಅರಣ್ಯದ ಹಂಚಿನಲ್ಲಿ ಪ್ರರತಿಭಟನೆ ನಡೆಸಿದರು. ಈ ವಿಚಾರವಾಗಿ ಶಾಸಕರು ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿರುವ ಬಗೆ  ಮಾಹಿತಿ ನೀಡಿದರು. ಪ್ರಮುಖರಾದ ಚೆಪ್ಪುಡೀರ ಕಾರ್ಯಪ್ಪ, ಚಕ್ಕೇರ ಬೆಳ್ಳಿಯಪ್ಪ, ಚೆಪ್ಪಡೀರ ರಂಜನ್‌, ಉಮೇಶ್‌, ಮಲ್ಲಂಗಡ ಸನ್ನಿ, ಕರುಣಾಕರ, ಚೆಪ್ಪುಡೀರ ಮಾಚಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next