Advertisement

ಹಾಲಿನ ದರ ಹೆಚ್ಚಳ ಮಾಡದೇ ರೈತರಿಗೆ ಮೋಸ

05:54 PM Aug 12, 2022 | Team Udayavani |

ನೆಲಮಂಗಲ: ಒಂದು ಲೀಟರ್‌ ಹಾಲಿನ ಉತ್ಪಾದನಾ ವೆಚ್ಚ 2018ರಲ್ಲೇ 36 ರೂ. ಇತ್ತು. ಆದರೆ, 2022ರಲ್ಲಿ ಸರ್ಕಾರ ಹಾಗೂ ಬಮೂಲ್‌ ರೈತರಿಗೆ ಕೇವಲ 27 ರೂ. ನೀಡಿ ಮೋಸ ಮಾಡುತ್ತಿದೆ ಎಂದು ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ತಿಮ್ಮರಾಜು ಆಕ್ರೋಶ ವ್ಯಕ್ತ ಪಡಿಸಿದರು.

Advertisement

ನಗರದ ಖಾಸಗಿ ಹೋಟಲ್‌ನಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಹಾಲು ಉತ್ಪಾದಕರ ವಿವಿಧ ಬೇಡಿಕೆಗಳ ಹೋರಾ ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಒಂದು ಲೀಟರ್‌ ಹಾಲಿಗೆ ಕೇವಲ 27 ರೂ. ಹಾಗೂ ಸಹಾಯ ಧನ 5 ರೂ. ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ಅನ್ಯಾಯವಾ ಗುತ್ತಿದ್ದು, ಸರ್ಕಾರ, ಬಮೂಲ್‌ ಹಾಲಿನ ದರ ಹೆಚ್ಚಳ ಮಾಡಬೇಕು. ಇಲ್ಲ ನಮ್ಮ ಹೋರಾಟ ಉಗ್ರರೂಪದಲ್ಲಿ ಮಾಡಬೇಕಾಗುತ್ತದೆ ಎಂದರು.

ನ್ಯಾಯ ಸಿಗದಿದ್ದರೇ ಉಪವಾಸ ಸತ್ಯಾಗ್ರಹ: ಬಿಜೆಪಿ ಮುಖಂಡ ಭವಾನಿ ಶಂಕರ್‌ ಬೈರೇಗೌಡ್ರು ಮಾತನಾಡಿ, ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದು, ಈ ಹೋರಾಟಕ್ಕೆ ನಿರ್ದೇಶಕರು ಬೆಂಬಲ ಸೂಚಿಸಬೇಕು. ನಾವು ಮಾತ್ರ ಈ ಹೋರಾಟದಲ್ಲಿ ಪ್ರಾಣ ಬಿಟ್ಟರು ಪರವಾಗಿಲ್ಲ. ಹಾಲಿನ ದರ ಹೆಚ್ಚಳವಾಗುವವರೆಗೂ ನಿರಂತರವಾಗಿ ಹೋರಾಡುತ್ತೇವೆ. ಒಂದು ತಿಂಗಳ ಗಡುವು ನೀಡಿದ್ದು, ಬೇಡಿಕೆಗೆ ನ್ಯಾಯ ಸಿಗದಿದ್ದರೇ ಅಮರಾಣಾಂತ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ಸರ್ಕಾರ, ಬಮೂಲ್‌ ರೈತರಿಗೆ ಪಶು ಆಹಾರದ ದರವನ್ನು ಹೆಚ್ಚಿಗೆ ಮಾಡಿ ಹಾಲಿನ ದರವನ್ನು ಕಡಿಮೆ ಮಾಡುವುದು ಯಾವ ನ್ಯಾಯ. ಬಮೂಲ್‌ ನಿರ್ದೇಶಕರು ಮೌನವಾಗಿ ಮನೆ ಸೇರಿದ್ದಾರೆ ಎಂದರು.

ಪಕ್ಷಾತೀತ ಹೋರಾಟ: ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಹಾಲಿನ ದರ ಹೆಚ್ಚಳ ಮಾಡುವ ಉದ್ದೇಶದಿಂದ ಹೋರಾಟ ಮಾಡುತ್ತಿದ್ದು, ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸ ಲಿದ್ದಾರೆ. ರೈತರಲ್ಲಿ ಪಕ್ಷಗಳನ್ನು ತಂದು ಹೋರಾಟದ ದಮನಕ್ಕೆ ಮುಂದಾಗುವ ಶಕ್ತಿಗಳಿಗೆ ಹಾಲು ಉತ್ಪಾದಕರು ಬುದ್ಧಿ ಕಲಿಸಿದರೇ ರೈತರ ಬೇಡಿಕೆಗೆ ಮನ್ನಣೆ ಸಿಗಲಿದೆ ಎಂದರು.

ಬಿಜೆಪಿ ಮುಖಂಡ ಸುಬ್ಬಣ್ಣ, ಕಾಂಗ್ರೆಸ್‌ ಮುಖಂಡ ಹರೀಶ್‌ ಬಾಬು, ವಕೀಲ ಹಂಚಿಪುರ ಅನ್ನದಾನಯ್ಯ, ಹಂಚೀಪುರ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ವಿಜಯಕುಮಾರ್‌, ಯಂಟಗ ನಹಳ್ಳಿ ಅಧ್ಯಕ್ಷ ಬೈರಣ್ಣ, ಬ್ಯಾಡರಹಳ್ಳಿ ಅಧ್ಯಕ್ಷ ರಾಜಶೇಖರ್‌, ಗ್ರಾಪಂ ಮಾಜಿ ಸದಸ್ಯೆ ಗೀತಾ, ಯುವಮು ಖಂಡ ರಾಹುಲ್‌ ಗೌಡ, ತಾಲೂಕಿನ ವಿವಿಧ ಹಾಲು ಉತ್ಪಾದಕ ಸಂಘಗಳ ಕಾರ್ಯ ದರ್ಶಿಗಳು ಹಾಗೂ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next