Advertisement

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

10:43 PM May 22, 2022 | Team Udayavani |

ಚಂಡೀಗಢ: ದೇಶದ ರೈತರಿಗೆ ಸರ್ಕಾರವನ್ನು ಬದಲಿಸುವ ತಾಕತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ.

Advertisement

ಪಂಜಾಬ್‌ನಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಹೋರಾಟದಲ್ಲಿ ಮೃತರಾದ ರೈತರ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ ವಿತರಿಸುವ ಪಂಜಾಬ್‌ ಸರ್ಕಾರದ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ.

“ರೈತರು ಬಯಸಿದರೆ ಸರ್ಕಾರವನ್ನೇ ಬದಲಿಸಬಹುದು. ಅದೇನೂ ದೊಡ್ಡ ವಿಚಾರವಲ್ಲ. ರೈತರ ಬೆಳೆಗೆ ಸೂಕ್ತ ಲಾಭದಾಯಕ ಬೆಲೆ ಕೊಡುವುದಾಗಿ ಸರ್ಕಾರದಿಂದ ಸಾಂವಿಧಾನಿಕ ಖಾತರಿ ಬರುವವರೆಗೂ ರೈತರು ಹೋರಾಟ ಮುಂದುವರಿಸಬೇಕು’ ಎಂದು ಅವರು ಹೇಳಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next