ಚಿತ್ರದುರ್ಗ: ಜಿಲ್ಲೆಯಾದ್ಯಂತ ಅನೇಕ ರೈತರ ಬಿಪಿಎಲ್‌ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಈ ಆದೇಶವನ್ನುಹಿಂಪಡೆದು ಮತ್ತೆ ರೈತರಿಗೆ ಬಿಪಿಎಲ್ ಕಾರ್ಡ್‌ನೀಡಬೇಕು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷಈಚಘಟ್ಟ ಸಿದ್ಧವೀರಪ್ಪ ಒತ್ತಾಯಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಸಂಕಷ್ಟದಿಂದಜನರು ತತ್ತರಿಸಿದ್ದಾರೆ. ಅದರಿಂದ ಇನ್ನೂ ಹೊರ ಬಂದಿಲ್ಲ.ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ.
ರೈತರ ಜಮೀನುಗಳಲ್ಲಿ ಬೆಳೆಗಳು ಹಾಳಾಗಿ ನಷ್ಟಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿಅನೇಕ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆಎಂದು ಅಸಮಾಧಾನ ವ್ಯಕ್ತಪಡಿಸಿದರು.ಅನೇಕ ಜನರ ಜಮೀನುಗಳು ಅವರತಂದೆಯ ಹೆಸರಿನಲ್ಲಿವೆ. ಮಕ್ಕಳು ಆ ಜಮೀನನ್ನುಅನುಭವಿಸುತ್ತಿದ್ದಾರೆ.
ಇತ್ತೀಚಿನ ಮಳೆ ಪರಿಸ್ಥಿತಿ, ದುಬಾರಿಕೂಲಿ, ಕೃಷಿ ಉತ್ಪನ್ನಗಳಿಗೆ ಬೆಲೆ ಸಿಗದೆ ಇರುವುದು, ಈಎಲ್ಲಾ ಅಂಶಗಳಿಂದ ಕೃಷಿ ಮಾಡುವುದೇ ದುಸ್ತರವಾಗಿದೆ.ಸೂಕ್ತ ಬೆಲೆ ಇಲ್ಲದ ಕಾರಣ ಎಷ್ಟೋ ರೈತರು ಬೆಳೆ ಕಟಾವುಮಾಡಿಲ್ಲ. ಹೊಲದಲ್ಲೇ ಕೊಳೆಯುತ್ತಿದೆ. ಇಂತಹಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ಪಡಿತರ ಧಾನ್ಯಅವರ ಜೀವನಕ್ಕೆ ನೆರವಾಗುತ್ತಿದೆ. ಈಗ ಬಿಪಿಎಲ್‌ಕಾರ್ಡ್ ರದ್ದು ಮಾಡಿರುವುದು ಗಾಯದ ಮೇಲೆ ಬರೆಎಳೆದಂತಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಈಗಾಗಲೇ 18 ಸಾವಿರಕ್ಕೂ ಹೆಚ್ಚುಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಇನೂ 9 ಸಾವಿರಕಾರ್ಡ್‌ಗಳ ರದ್ದು ಮಾಡಲು ಸಿದ್ಧತೆ ನಡೆಯುತ್ತಿದೆ.ಕಾರ್ಡ್‌ಗಳನ್ನು ಹಿಂಪಡೆಯುವ ಮುನ್ನ ರೈತರ ಸ್ಥಿತಿಗತಿಅರಿತುಕೊಳ್ಳಬೇಕು. ಕೆಲವು ಕುಟುಂಬದಲ್ಲಿ ಏಕವ್ಯಕ್ತಿಇದ್ದಾರೆ. ಮಕ್ಕಳು ಮರಿ ಇರುವುದಿಲ್ಲ. ಅಂತಹವರಿಗೆಕಾರ್ಡ್ ನೀಡಲಾಗಿಲ್ಲ. ಕುಟುಂಬದಲ್ಲಿ ಒಬ್ಬರುಆದಾಯ ತೆರಿಗೆ ಕಟ್ಟಿದಲ್ಲಿ ಆ ಕುಟುಂಬ ಎಲ್ಲ ಸದಸ್ಯರಿಗೆಪಡಿತರ ಧಾನ್ಯ ನೀಡಲು ನಿರಾಕರಿಸಲಾಗುತ್ತಿದೆ.
ಇದುಸರಿಯಲ್ಲ, ಈ ಕುರಿತು ಸಂಬಂ ಸಿದ ಅಧಿ ಕಾರಿಗಳುಪರಿಶೀಲನೆ ನಡೆಸಬೇಕೆಂದರು.ಜನರು ಕೊರೋನಾ ಸಂಕಷ್ಟದಿಂದ ಇನ್ನೂ ಹೊರಗೆಬಂದಿಲ್ಲ. ಹಾಗಾಗಿ ರದ್ದು ಮಾಡಿರುವ ಎಲ್ಲ ಕಾಡ್ìಗಳನ್ನು ಮುಂದಿನ ತಿಂಗಳ ಮೊದಲ ವಾರದೊಳಗಾಗಿ ನೀಡಬೇಕು.
ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೋರಾಟ ನಡೆಸಲಾಗುವುದು ಎಂದುಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷಜಿ.ಆರ್.ಹಳ್ಳಿ ಪ್ರವೀಣ್, ತೊಡರನಹಾಳ್, ಶಂಕರಪ್ಪ,ಚಿಕ್ಕಂದವಾಡಿ ನಾಗರಾಜ್ ಇತರರು ಇದ್ದರು.