Advertisement

ರೈತರ ಆಕರ್ಷಿಸುವ ಕೃಷಿ ಮೇಳ

07:20 AM Feb 03, 2019 | |

ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿರುವ ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನ ರೈತರನ್ನು ಕೈ ಬೀಸಿ ಕರೆಯುತ್ತಿದೆ. ಸುಮಾರು ನಾಲ್ಕು ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಕೈಗೊಂಡಿರುವ‌ ಕೃಷಿ ಮೇಳದಲ್ಲಿ ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ ನೀಡಲಾಗಿದೆ.

Advertisement

ಪ್ರಸಿದ್ಧ ನಂಜನಗೂಡು ರಸ ಬಾಳೆ, ಈರನಗೆರೆ ಬದನೆ ಮತ್ತಿತರ ಬೆಳೆಗಳ ಪುನಶ್ಚೇತನಕ್ಕೆ ಮೇಳದಲ್ಲಿ ಉತ್ತೇಜನ ನೀಡಲಾಗಿದೆ. ಬೆಳೆ ಬೆಳಯಬೇಕಾದರೆ ವಹಿಸಬೇಕಾದ ಸಿದ್ಧತೆ, ಅವುಗಳ ಇಳುವರಿ ಮತ್ತು ಮಾರಾಟದ ಕುರಿತು ರೈತರಿಗೆ ಅರಿವು ಮೂಡಿಸಲಾಗುತ್ತಿದೆ.

30 ರಿಂದ 90 ದಿನಗಳಲ್ಲಿ ಫ‌ಲ ನೀಡಿ ಕೃಷಿಕರಿಗೆ ಆದಾಯ ತರುವ 160 ವಿವಿಧ ಬೆಳೆಗಳನ್ನು ಇಲ್ಲಿ ಬೆಳೆದು ತೋರಲಾಗುತ್ತಿವೆ.

ಜೊತೆಗೆ ವಿದೇಶಿ ತೋಟಗಾರಿಕೆ ಬೆಳೆಗಳಾದ ಸಿಲೇರಿ, ಚೈನೀಸ್‌ ಕ್ಯಾಬೀಜ್‌ ಪಾಕ್‌ ಚಾಯ್‌, ರೇಡ್‌ ಕ್ಯಾಬೇಜ್‌, ಐಸ್ಬರ್ಗ್‌, ಲಡಟ್ಯೂಸ್‌ ಬಟರ್‌ ಹೆಡ್‌, ಜುಕುನಿ ಬ್ರೊಕೊಲಿ, ಪ್ಯಾಟಿಪ್ಯಾನ್‌ ಹಾಗೂ ಗರ್ಕಿನ್‌ ಬೆಳೆಗಳನ್ನು ಈ ಕೃಷಿ ಮೇಳದಲ್ಲಿ ಬೆಳೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next