Advertisement

ರೈತರ ಸಮಸ್ಯೆ ನೀಗಿಸಲು ರೈತ ಸಂಘ ಆಗ್ರಹ

01:24 PM Jan 15, 2021 | Team Udayavani |

ಹಾನಗಲ್ಲ: ರೈತ ಸಮುದಾಯಗಳ ಸಮಸ್ಯೆಗಳನ್ನು ಕೂಡಲೇ nಇತ್ಯರ್ಥಗೊಳಿಸುವಂತೆ ಹಾಗೂ ಹಾನಗಲ್ಲ ತೋಟಗಾರಿಕೆ ಇಲಾಖೆಗೆ ಅಗತ್ಯ ಸಿಬ್ಬಂದಿ ಒದಗಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾ ಧಿಕಾರಿಗಳು ಬೆಂಗಳೂರು ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ವಿವರ ನೀಡಿರುವ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹಾಗೂ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಕೃಷಿ ಮತ್ತು ತೋಟಗಾರಿಕೆ ಬೆಳೆ ವಿಮಾ ಪರಿಹಾರದಲ್ಲಿ ಲೋಪದೋಷವಾಗಿದೆ. 2018-19 ರಲ್ಲಿ ಹಾರ್ಟಿಕಲ್ಚರ್‌ ಕ್ರಾಪ್‌ ವೆರಿಫಿಕೇಶನ್‌ ಪೆಂಡಿಂಗ್‌ ಮತ್ತು ರೀವೆರಿಫಿಕೇಶನ್‌ ಪೆಂಡಿಂಗ್‌ ಎಂಬ ಕಾರಣದಿಂದ ಕೆಲವು ರೈತರಿಗೆ ಬೆಳೆ ವಿಮಾ ಹಣ ಜಮಾ ಆಗಿರಲಿಲ್ಲ. ಹಾರ್ಟಿಕಲ್ಚರ್‌ ವೆರಿಫಿಕೇಶನ್‌ ಪೆಂಡಿಂಗ್‌ ಎಂದು 1134 ರೈತರಿಗೆ, ರೀ ವೆರಿಫಿಕೇಶನ್‌ ಪೆಂಡಿಂಗ್‌ ಎಂಬ ಕಾರಣದಿಂದ 2723 ರೈತರಿಗೆ ಹಣ ಬಂದಿರಲಿಲ್ಲ.

Advertisement

ಈ ಕುರಿತು ಆಯುಕ್ತರು, ವಿಮಾ ವಿಭಾಗದ ಜಂಟಿ ಕೃಷಿ ನಿರ್ದೇಶಕರ ಗಮನಕ್ಕೆ ತರಲಾಗಿತ್ತು. ಈಗಾಗಲೇ 2723 ರೈತರಲ್ಲಿ 336 ಅರ್ಜಿಗಳನ್ನು ವಿಮಾ ಕಂಪನಿ ನಿರಾಕರಿಸಿದೆ. ಇನ್ನುಳಿದ 2387 ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಕೂಡಲೇ ಹಣ ಪಾವತಿಸಲಾಗುವುದು. ಮತ್ತು 1134 ರೈತರ ಅರ್ಜಿಗಳಲ್ಲಿ 635 ಅರ್ಜಿಗಳನ್ನು ಸರಿಪಡಿಸಲು ವಿಮಾ ಕಂಪನಿ ಕೃಷಿ ಇಲಾಖೆಯಿಂದ ಅಂಕಿ-ಅಂಶಗಳನ್ನು ಪಡೆದುಕೊಂಡು ಇತ್ಯರ್ಥಪಡಿಸಿದೆ. ಇನ್ನುಳಿದ 499 ಅರ್ಜಿಗಳನ್ನು ಒಂದು ವಾರದೊಳಗೆ ಇತ್ಯರ್ಥಪಡಿಸುವ ಭರವಸೆಯನ್ನು ಆಯುಕ್ತ ಬ್ರಿಜೇಶಕುಮಾರ ದೀಕ್ಷಿತ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ನಾಲ್ಕು ಭಾಷೆಗಳಲ್ಲಿ ಪ್ರೇಮ್‌ ಏಕ್‌ ಲವ್‌ ಯಾ: ಪ್ರೇಮಿಗಳ ದಿನಕ್ಕೆ ಮೊದಲ ಹಾಡು

2019-20ರಲ್ಲಿ ಮುಂಗಾರಿನ ಭತ್ತ, ಗೋವಿನಜೋಳದ ವಿಮಾ ಪರಿಹಾರದ ಮೊತ್ತ ಇನ್ನೂ ಸಾವಿರಾರು ರೈತರ ಖಾತೆಗೆ ಜಮಾ ಆಗಿಲ್ಲ. ಹಣ ಜಮಾ ಆಗದಿರುವ ಬಗ್ಗೆ ತಂತ್ರಾಂಶದಲ್ಲಿ ನಿಖರ ಮಾಹಿತಿ ಲಭ್ಯವಿದ್ದು, ಸಂಬಂ ಧಿಸಿದ ಇಲಾಖೆಯಿಂದ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಲಾಗಿದೆ. ಕೂಡಲೇ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದ್ದಾರೆ. ತೋಟಗಾರಿಕೆ ಇಲಾಖೆಯ ಅಡಕೆ ಮತ್ತು ಮಾವು ವಿಮಾ ಪರಿಹಾರದಲ್ಲೂ ಸಮಸ್ಯೆಯಾಗಿದ್ದು, ಎಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಆಯುಕ್ತರಲ್ಲಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next