Advertisement

ಅರಣ್ಯ ಭೂ ಒತ್ತುವರಿ ತೆರವಿಗೆ ರೈತ ಸಂಘ ಆಗ್ರಹ

06:59 AM Jun 10, 2020 | Lakshmi GovindaRaj |

ಕೋಲಾರ: ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ತೆರವುಗೊಳಿಸುವಂತೆ ಹಾಗೂ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಜೂ.15 ಅರಣ್ಯ ಇಲಾಖೆ ಮುತ್ತಿಗೆ ಹಾಕಲು ಸಂಘದ  ಸಭೆಯಲ್ಲಿ  ತೀರ್ಮಾನಿಸಲಾಯಿತು.

Advertisement

ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಂತ ಸರ್ಕಾರಿ ಗೋಮಾಳ, ಗುಂಡುತೋಪು, ಕೆರೆ, ಕುಂಟೆ ಸಂಪೂ ರ್ಣ ವಾಗಿ ಬಲಾ ಡ್ಯರು, ಕೆಲ ರಾಜಕೀಯ ಮುಖಂಡರು,  ರಿಯಲ್‌ ಎಸ್ಟೇಟ್‌ ಉದ್ಯ ಮಿಗಳು ಒತ್ತು ವರಿ ಮಾಡುವ ಜೊತೆಗೆ ನಕಲಿ ದಾಖಲೆಗಳ ಸೃಷ್ಟಿಸಿಕೊಂಡಿದ್ದಾರೆ ಎಂದು ದೂರಿದರು.

ಈಗ ಅವರ ಕಣ್ಣು ಅರಣ್ಯ ಭೂಮಿ ಮೇಲೆ ಬಿದ್ದಿದೆ. ಎಲ್ಲಾ ತಾಲೂಕುಗಳಲ್ಲಿ ಸಾವಿರಾರು  ಎಕರೆ ಅರಣ್ಯ ಭೂಮಿ ಕೆಲವು ಕಂದಾಯ, ಸರ್ವೇ ಹಾಗೂ ನೋಂದಣಿ ಅಧಿಕಾರಿಗಳ ಸಮ್ಮುಖದಲ್ಲಿ ಕೋಟ್ಯಂತರ ರೂ.ಗೆ ಅರಣ್ಯ ಭೂಮಿಗೆ ದಾಖಲೆ ಸೃಷ್ಟಿಸಿ, ಬ್ಯಾಂಕ್‌ಗಳಲ್ಲಿ ನೂರಾರು ಕೋಟಿ ರೂ. ಸಾಲ ಪಡೆದಿದ್ದಾರೆ. ಇಂತಹವರ ವಿರುದ ಕ್ರಮ ಏಕೆ ಇಲ್ಲ ಎಂದು ಅರಣ್ಯಾಧಿಕಾರಿಗಳ ವಿರುದ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌ ಮಾತನಾಡಿದರು. ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಫಾರೂಕ್‌ಪಾಷ,  ಈಕಂಬಳ್ಳಿ ಮಂಜುನಾಥ್‌, ವಕ್ಕ ಲೆರಿ ಹನುಮಯ್ಯ, ಮಂಗ ಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಅಶ್ವತ್ಥಪ್ಪ, ಜಗದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next