ನವ ದೆಹಲಿ : ರೈತರು ತಮ್ಮ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಮಾರಾಟ ಮಾಡಲು ಸಾಧ್ಯವಾಗದ ಕಾರಣ ಮುಂದಿನ ದಿನಗಳಲ್ಲಿ ಕೃಷಿ ಚಳುವಳಿಯನ್ನು ಪಶ್ಚಿಮ ಬಂಗಾಳಕ್ಕೆ ವಿಸ್ತರಿಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕೈಟ್ ಗುರುವಾರ (ಫೆ. 18) ಹೇಳಿದ್ದಾರೆ.
ರೈತರ ಬೆಳೆಗಲನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಚುನಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ರೈತರೊಂದಿಗೆ ಚರ್ಚಿಸಿ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಎ ಎನ್ ಐ ಗೆ ಟಿಕಾಯತ್ ತಿಳಿಸಿದ್ದಾರೆ.
ಓದಿ : ಗಾಂಧಿ ಕುಟುಂಬದ ಆಪ್ತ, ಮಾಜಿ ಕೇಂದ್ರ ಸಚಿವ ಕ್ಯಾಪ್ಟನ್ ಸತೀಶ್ ಶರ್ಮಾ ನಿಧನ
ಬಂಗಾಲ ಸಮುದ್ರ ತೀರದಲ್ಲಿದೆ. ಅಲ್ಲಿನ ಮೀನುಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಮೀನುಗಾರರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವಾಗ ಾಮದು ಜಾಸ್ತಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾವು ನಮ್ಮ ಪ್ರತಿಭಟನೆಯನ್ನು ಪಶ್ಚಿಮ ಬಂಗಾಳಕ್ಕೆ ವಿಸ್ತರಿಸುತ್ತೆವೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬರುತ್ತಿದೆ ಎಂದು ನಾವು ಅಲ್ಲಿ ನಮ್ಮ ಪ್ರತಿಭಟನೆಯನ್ನು ಮಾಡಲು ಹೋಗುತ್ತಿಲ್ಲ. ಕೃಷಿ ಕಾಯ್ದೆಗಳ ಬಗ್ಗೆ ಅಲ್ಲಿನ ರೈತರಿಗೆ ಅರಿವು ಮೂಡಿಸಲು ನಾವು ನಮ್ಮ ಪ್ರತಿಭಟನೆಯನ್ನು ಅಲ್ಲಿಗೆ ಮುಂದುವರಿಸುತ್ತೇವೆ ಎಂದು ಟಿಕಾಯತ್ ಹೇಳಿದ್ದಾರೆ.
#RailRokoAndolan ಇಡೀ ಭಾರತಾದ್ಯಂತ ಇಂದು 12 ಗಂಟೆಯಿಂದ ನಡೆಯುತ್ತಿದೆ. ದೇಶದಾದ್ಯಂತ ರೈತರು ಇಂದು `ರೈಲ್ ರೊಕೊ ಆಂದೋಲನದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಓದಿ : ಕೋವಿಡ್ ಸೋಂಕು ಹೆಚ್ಚಳ: ಮಹಾರಾಷ್ಟ್ರದ ಅಕೋಲಾ, ಅಮರಾವತಿಯಲ್ಲಿ ಮತ್ತೆ ಲಾಕ್ ಡೌನ್?