Advertisement

ರೈತರ ಪ್ರತಿಭಟನೆ ಅನಿರ್ದಿಷ್ಟಾವದಿಯವರೆಗೆ ನಡೆಯಲಿದೆ : ಟಿಕಾಯತ್

02:38 PM Feb 12, 2021 | Team Udayavani |

ಘಾಜಿಯಾಬಾದ್ : ರೈತರ ಪ್ರತಿಭಟನೆ ಅನಿರ್ದಿಷ್ಟಾವದಿಯವರೆಗೆ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ವಕ್ತಾರ ರಾಕೇಶ್ ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

“ರೈತರ ಪ್ರತಿಭಟನೆ ಎಲ್ಲಿಯತನಕ ನಡೆಯಲಿದೆ ಎನ್ನುವುದರ ಬಗ್ಗೆ ಯೋಜನೆಗಳಿಲ್ಲ. ಕಾಯ್ದೆಯನ್ನು ಹಿಂಪಡೆಯುವ ತನಕ ರೈತರು ಹಿಂದಿರುಗುವುದಿಲ್ಲ. ಅನಿರ್ದಿಷ್ಟಾವದಿವರೆಗೆ ರೈತರ ಪ್ರತಿಭಟನೆ ನಡೆಯಲಿದೆ. ಅಕ್ಟೋಬರ್ ತನಕ ರೈತರ ಪ್ರತಿಭಟನೆ ಮುಂದುವರಿಯಬಹುದು” ಎಂದು ಅವರು ಶುಕ್ರವಾರ(ಫೆ.12) ಘಾಜಿಯಾಬಾದ್ ನಲ್ಲಿ ಎಎನ್ಐ ಸುದ್ದಿ ಸಂಸ್ಥಗೆ ಪ್ರತಿಕ್ರಿಯಿಸಿದ್ದಾರೆ.

ಓದಿ :  ನನ್ನ ಹೆಸರಲ್ಲಿ‌ ಬೇಡ, ರಾಜ್ಯದ ಜನರ ಹೆಸರಲ್ಲಿ ಪೂಜೆ ಮಾಡಿ ಎಂದ ಸಿದ್ದರಾಮಯ್ಯ

ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಗುರ್ನಾಮ್ ಸಿಂಗ್, “ರೈತರ ಪ್ರತಿಭಟನೆ ಅಕ್ಡೋಬರ್ ತನಕ ನಡೆಯಲಿದೆ” ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಟಿಕಾಯತ್ ಈ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಪ್ರತಿ ಅಕ್ಟೋಬರ್ 2ರಂದು ಘಾಜಿಪುರ ಗಡಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಾರೆ. 2018ರಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಗುಂಡುಗಳನ್ನು ಹಾರಿಸಲಾಯಿತು. ಪ್ರತಿ ವರ್ಷ ಘಾಜಿಪುರ ಗಡಿಯಲ್ಲಿ ಕಾರ್ಯಕ್ರಮವನ್ನು ಮಾಡುತ್ತೇವೆ. ಈ ವರ್ಷವೂ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

Advertisement

ಇನ್ನು, ಸಂಸತ್ತಿನಲ್ಲಿ ಕೃಷಿ ಕಾನೂನಿನ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿರುವುದು ಒಳ್ಳೆಯ ಸಂಗತಿ ಎಂದಿದ್ದಾರೆ.

ಇಷ್ಟರ ಮಟ್ಟಿಗೆ ಇಡೀ ದೇಶದಾದ್ಯಂತ ರೈತರು ಪ್ರತಿಭಟಿಸುತ್ತಿರುವುದಕ್ಕೆ ಬಲವಾದ ಕಾರಣವಿದೆ. ಒಂದು ವೇಳೆ ಕೃಷಿ ಕಾನೂನುಗಳನ್ನು ರೈತರು ಅಂಗೀಕರಿಸದಿದ್ದರೇ, ಆ ಕಾಯ್ದೆಗಳನ್ನು ರದ್ದುಗೊಳಿಸದಿದ್ದಲ್ಲಿ ಪರ್ಯಾಯವಾಗಿ ಏನು ಮಾಡುತ್ತಾರೆ..? ಎಂದು ಟಿಕಾಯತ್ ಪ್ರಶ್ನಿಸಿದ್ದಾರೆ.

ಓದಿ :  ಟ್ರಂಪ್, ಮೆಲನಿಯಾ ನಡುವೆ ಬಿರುಕು..!? ಎಲ್ಲಾ ಸಾಮಾಜಿಕ ಜಾಲತಾಣಗಳು ಡಿಲೀಟ್..!

 

 

 

Advertisement

Udayavani is now on Telegram. Click here to join our channel and stay updated with the latest news.

Next